ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಹೊಸ ಕೊರೊನಾ ಪ್ರಕರಣ ದೃಢಪಟ್ಟಿಲ್ಲ. ಅಲ್ಲದೆ 6 ಮಂದಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ ಎ.17 ರಂದು ಒಂದೇ ಕೊರೊನಾ ಪ್ರಕರಣ ದಾಖಲಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಸಂಪರ್ಕದಿಂದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ಕಾಸರಗೋಡು-6, ಎರ್ನಾಕುಳಂ-2, ಆಲಪ್ಪುಳ-1 ಮತ್ತು ಮಲಪ್ಪುರಂ-1 ಎಂಬಂತೆ ಶುಕ್ರವಾರ ಗುಣಮುಖರಾಗಿದ್ದಾರೆ.
ಕೇರಳದಲ್ಲಿ ಒಟ್ಟು ಇದು ವರೆಗೆ 395 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಈ ಪೈಕಿ 255 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 138 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಇದು ವರೆಗೆ 168 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಈ ಪೈಕಿ 113 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 55 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 7901 ಮಂದಿ ನಿಗಾದಲ್ಲಿದ್ದಾರೆ. 7789 ಮಂದಿ ಮನೆಗಳಲ್ಲೂ, 112 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ ಇಬ್ಬರು ಕಾಂಞಂಗಾಡ್‍ನ ಜಿಲ್ಲಾ ಆಸ್ಪತ್ರೆಯಲ್ಲೂ, ನಾಲ್ಕು ಮಂದಿ ಕಾಂಞಂಗಾಡ್‍ನ ಸರ್ಜಿ ಕೇರ್ ಆಸ್ಪತ್ರೆಯಲ್ಲೂ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 78980 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 78454 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದರೆ, 526 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ 84 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ತನಕ 18029 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 17279 ಸ್ಯಾಂಪಲ್ ನೆಗೆಟಿವ್ ಆಗಿದೆ.
116 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಎ.16ರಂದು ಕಾಸರಗೋಡು ಜಿಲ್ಲೆಯಲ್ಲಿ 116 ಕೇಸುಗಳನ್ನು ದಾಖಲಿಸಲಾಗಿದೆ. 50 ಮಂದಿಯನ್ನು ಬಂ„ಸಲಾಗಿದ್ದು, 6 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3 ಕೇಸುಗಳು, ಕುಂಬಳೆ-2, ಕಾಸರಗೋಡು-24, ವಿದ್ಯಾನಗರ-13, ಆದೂರು-2,ಬೇಡಗಂ-6, ಮೇಲ್ಪರಂಬ-9, ಬೇಕಲ-6, ಅಂಬಲತ್ತರ-1,ನೀಲೇಶ್ವರ-1, ಹೊಸದುರ್ಗ-13, ಚಂದೇರ-26, ಚೀಮೇನಿ-1, ವೆಳ್ಳರಿಕುಂಡ್-4, ಚಿತ್ತಾರಿಕಲ್-5 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 1064 ಕೇಸುಗಳನ್ನು ದಾಖಲಿಸಲಾಗಿದೆ. 1484 ಮಂದಿಯನ್ನು ಬಂ„ಸಲಾಗಿದೆ. 514 ವಾಹನಗಳನ್ನು ವಶಪಡಿಸಲಾಗಿದೆ.
ಮುಂದಿನ ವಾರದಿಂದ ಇಮ್ಯುನೈಸೇಷನ್ ಆರಂಭ :
ಮಕ್ಕಳ ರೋಗ ಪ್ರತಿರೋಧಕ್ಕಾಗಿ ನೀಡಲಾಗುವ ಇಮ್ಯುನೈಸೇಷನ್ ಪುನರಾರಂಭಿಸಲು ಆರೋಗ್ಯ ಇಲಾಖೆ ನಿಬಂಧನೆಗಳನ್ನು ಪ್ರಕಟಿಸಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.
ಕೋವಿಡ್ 19 ಕಾರಣದಿಮದ ನಿಲುಗಡೆ ಮಾಡಲಾಗಿದ್ದ ಇಮ್ಯುನೈಸೇಷನ್ ಮುಂದಿನ ವಾರದಿಂದ ಪುನರಾರಂಭಿಸಲು ಆದೇಶ ನೀಡಲಾಗಿದೆ. ಮಕ್ಕಳಿಗೆ, ತಾಯಂದಿರಿಗೆ, ಆರೋಗ್ಯ ಕಾರ್ಯಕರ್ತರಿಗೆ ರೋಗ ಹರಡುವಿಕೆ ನಡೆಯದಂತೆ ಜಾಗ್ರತೆ ಪಾಲಿಸುವ ಮೂಲಕ ಇಮ್ಯುನೈಸೇಷನ್ ನೀಡಬೇಕು ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ.
ಮಾಂಸದ ಕೋಳಿ ರವಾನೆಗೆ ಆದೇಶ : ಮಂಗಳೂರಿನಿಂದ ಹೆಚ್ಚುವರಿ ಮಾಂಸದ ಕೋಳಿಗಳನ್ನು ಜಿಲ್ಲೆಗೆ ರವಾನಿಸುವಂತೆ ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಜಿಲ್ಲಾ ಮೃಗ ಸಂರಕ್ಷಣೆ ಅ„ಕಾರಿಗೆ ಆದೇಶ ನೀಡಿದರು.
ಜಿಲ್ಲೆಯಲ್ಲಿ ಕೋಳಿ ಮಾಂಸದ ಲಭ್ಯತೆ ಕಡಿತಗೊಂಡಿದ್ದು, ಬೆಲೆ ಹೆಚ್ಚಳವಾಗಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಬೇಕಾಗಿ ಅವರು ತಿಳಿಸಿದರು.


