HEALTH TIPS

27 ಅಡಿವರೆಗೂ ಕೊರೋನಾ ವೈರಸ್ ಚಲನೆ, ಗಾಳಿಯಲ್ಲಿ ಗಂಟೆಗಳ ಕಾಲ ಜೀವ: ಬೆಚ್ಚಿ ಬೀಳಿಸುತ್ತದೆ ಕೊರೋನಾ ವೈರಸ್ ಕುರಿತ ಎಂಐಟಿ ವಿಜ್ಞಾನಿಯ ಸಂಶೋಧನೆ


      ನವದೆಹಲಿ: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಹೇರಿ ಸಾಕಷ್ಟು ನಿಯಂತ್ರಣಾ ಕ್ರಮಗಳನ್ನು ಹೇರಿದ್ದು, ಅಗತ್ಯ ವಸ್ತುಗಳ ಖರೀದಿಗೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದೆ. ಆದರೆ ನಿಮಗೆ ಗೊತ್ತೇ ಕೊರೋನಾ ವೈರಸ್ 27  ಅಡಿಗಳವರೆಗೂ ಚಲಿಸಬಲ್ಲದು ಎಂಬ ಆಘಾತಕಾರಿ ಮಾಹಿತಿ ಇದೀಗ ಹೊರಬಿದ್ದಿದೆ.
      ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆಸಿರುವಂತೆಯೇ ವಿಶ್ವದ ಖ್ಯಾತನಾಮ ಸಂಶೋಧನಾ ಕೇಂದ್ರಗಳು ಈ ಮಾರಣಾಂತಿಕ ವೈರಸ್ ಕುರಿತು ಅಧ್ಯಯನ ನಡೆಸುತ್ತಿವೆ. ಈ ಪೈಕಿ ಅಮೆರಿಕ ಮೂಲದ ಎಂಐಟಿ ವಿಜ್ಞಾನಿ ಮತ್ತು ಪ್ರಾಧ್ಯಾಪಕಿ ಲಿಡಿಯಾ  ಬೌರೌಬಾ ಅವರೂ ಕೂಡ ವೈರಸ್ ಮೇಲೆ ತಮ್ಮ ಸಂಶೋಧನೆ ನಡೆಸಿದ್ದು, ಈ ವೇಳೆ ವೈರಸ್ ಕುರಿತ ಹಲವು ರೋಚಕ ಸಂಗತಿಗಳನ್ನು ಅವರು ಹೊರಹಾಕಿದ್ದಾರೆ. ವಿಶ್ವಾದ್ಯಂತ ವೈರಸ್ ಸೋಂಕು ತಡೆಗೆ ಕನಿಷ್ಠ 6 ಅಡಿ ಅಥವಾ 1 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರಗಳು  ಸೂಚನೆ ನೀಡಿವೆ. ಆದರೆ ಈ ಕೊರೋನಾ ವೈರಸ್ ಬರೊಬ್ಬರಿ 23ರಿಂದ 27 ಅಡಿ ದೂರದವರೆಗೂ ಚಲಿಸಬಲ್ಲದು ಎಂದು ಹೇಳಿದ್ದಾರೆ. 1930ರಲ್ಲಿನ ಸೋಂಕು ಪ್ರಕರಣದ ನಿಯಮದಂತೆ 1 ಮೀಟರ್ ಅಥವಾ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರಗಳು ಸೂಚಿಸುತ್ತಿವೆ.ಆದರೆ ಈ  ನಿಯಮ ಈಗ ಹಳೆಯದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  ಈ ಕೊರೋನಾ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ ಎಂಬ ವಾದವನ್ನು ಅಲ್ಲಗಳೆದಿರುವ ಲಿಡಿಯಾ ಬೌರೌಬಾ ಅವರು  ಕೊರೋನಾ ವೈರಸ್ ಗಾಳಿಯಲ್ಲಿ ಗಂಟೆಗಳ ಕಾಲ ಜೀವಿಸಬಲ್ಲದು. ವೈರಸ್ ನ ಕೆಲ ಅಂಶಗಳು ರೋಗಿಗೆ ಅಳವಡಿಸಲಾಗುವ ವೆಂಟಿಲೇಟರ್ ನಲ್ಲೂ  ಉಳಿದುಬಿಡುತ್ತದೆ. ಇಂತಹ ಸಾಕಷ್ಟು ಉದಾಹರಣೆಗಳು ಚೀನಾದ ವುಹಾನ್ ನಲ್ಲಿ ನಮಗೆ ಸಿಗುತ್ತವೆ ಎಂದು ಹೇಳಿದ್ದಾರೆ. ಹಾಲಿ ಸೋಷಿಯಲ್ ಡಿಸ್ಟೇನ್ಸಿಂಗ್ ನಂತಹ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿ ಅಂತರದ ಪ್ರಮಾಣವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ವೈರಸ್ ನಿಯಂತ್ರಣ  ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣ ಅಜಾಗರೂಕತೆ ಕಡ ಅವರಿಗೂ ಸೋಂಕು ತಗುಲುವಂತೆ ಮಾಡುತ್ತದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗೆ ಅತ್ಯಾಧುನಿಕ ಮತ್ತು ದೇಹದ ಎಲ್ಲ ಅಂಗಗಳನ್ನೂ ಮುಚ್ಚುವ  ರಕ್ಷಣಾ ಕವಚ ನೀಡಬೇಕು ಎಂದು ಹೇಳಿದ್ದಾರೆ.
        ಲಿಡಿಯಾ ಬೌರೌಬಾ ಅವರು ಕೆಮ್ಮುವಿಕೆ ಮತ್ತು ಸೀನುವಿಕೆಯ ಕುರಿತು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries