HEALTH TIPS

ಕರ್ನಾಟಕ-ಕೇರಳ ಗಡಿ ಬಂದ್: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವೈಫಲ್ಯ ಎಂದ ಬಿಜೆಪಿ


        ಮಂಗಳೂರು:ಕರ್ನಾಟಕ-ಕೇರಳ ಗಡಿಭಾಗವನ್ನು ಮುಚ್ಚಿರುವ ಬಗ್ಗೆ ಕೇರಳ ಮತ್ತು ಕರ್ನಾಟಕ ಸರ್ಕಾರಗಳ ಮಧ್ಯೆ ವಾದ-ವಿವಾದಗಳ ಮುಂದುವರಿದಿರುವಾಗ ಬಿಜೆಪಿ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ ಎನ್ನಲಾಗುತ್ತಿದೆ.
       ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲೆಯ ಬಿಜೆಪಿ ಶಾಸಕರು ಸೋಷಿಯಲ್ ಮೀಡಿಯಾದಲ್ಲಿ #SaveKarnatakafromPinarayi ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭಿಸಿದ್ದು ಕೇರಳ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಕೇರಳದಲ್ಲಿ ಆರೋಗ್ಯ ಸೇವೆ ಅಸಮರ್ಪಕವಾಗಿದ್ದು ಇದರಿಂದಾಗಿ ಅಲ್ಲಿನ ಜನರು ಮಂಗಳೂರನ್ನು ಅವಲಂಬಿಸಬೇಕಾಗಿ ಬಂದಿದೆ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್, ಗಡಿಯನ್ನು ತೆರೆದು ಕೇರಳದಲ್ಲಿನ ರೋಗಿಗಳು ಮಂಗಳೂರಿಗೆ ಬಂದು ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿರುವುದು ಮೂರ್ಖತನ, ರಾಜ್ಯವೊಂದು ಆರೋಗ್ಯ ಸೇವೆಗೆ ಬೇರೆ ರಾಜ್ಯವನ್ನು ನಂಬಿಕೊಂಡಿರುವುದು ದುರಂತ. ಕಾಸರಗೋಡು ಜಿಲ್ಲೆಯೊಂದರಲ್ಲಿಯೇ ಕರ್ನಾಟಕದ ಒಟ್ಟು ಕೊರೋನಾ ರೋಗಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗಡಿಯನ್ನು ತೆರೆದರೆ ಕಾಸರಗೋಡಿನಿಂದ ಖಂಡಿತವಾಗಿಯೂ ಮಂಗಳೂರಿಗೆ ಚಿಕಿತ್ಸೆಗೆ ಬರುತ್ತಾರೆ, ಆಗ ಇಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂದು ಕರ್ನಾಟಕದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
      ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಜನತೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಪಿಣರಾಯಿ ಅವರು ಅದಕ್ಕೆ ಅಡ್ಡಗಾಲು ಹಾಕಬಾರದು. ಅದರ ಬದಲಿಗೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಿ ಕಾಸರಗೋಡಿನಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆಯುವಂತೆ ಮನವಿ ಮಾಡಲಿ ಎಂದಿದ್ದಾರೆ.
         ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಮೂಲಭೂತ ಅವಶ್ಯಕತೆಯಾಗಿರುವ ಆರೋಗ್ಯ ಸೇವೆಗೆ ಕಾಸರಗೋಡಿನ ಮಂದಿ ಮಂಗಳೂರನ್ನು ಅವಲಂಬಿಸಿದ್ದಾರೆ. ಕೇರಳ ಮುಖ್ಯಮಂತ್ರಿಗಳು ಎಂತಹ ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದ್ದಾರೆ, ಈ ಸಂದರ್ಭದಲ್ಲಿ ಗಡಿಭಾಗವನ್ನು ಖಂಡಿತಾ ತೆರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries