ಬದಿಯಡ್ಕ: ಉಕ್ಕಿನಡ್ಕ ಕಾಸರಗೋಡು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 273 ಹುದ್ದೆಗಳಲ್ಲಿ ನೇಮಕಾತಿ ನಡೆಸಲು ರಾಜ್ಯ ಸಚಿವ ಸಂಪುಟ ಮಂಜೂರಾತಿ ನೀಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿರುವರು.
ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ 300 ಹಾಸುಗೆಗಳಿರುವ 24 ತಾಸುಗಳಲ್ಲಿ ಚಟುವಟಿಕೆ ನಡೆಸುತ್ತಿರುವ ತುರ್ತು ವಿಭಾಗ, ಒ.ಪಿ., ಐ.ಪಿ. ವಿಭಾಗಗಳಲ್ಲಿ ಚಟುವಟಿಕೆ ನಡೆಸಲು ಈ ನೇಮಕಾತಿ ನಡೆಯಲಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ 14.61 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗುತ್ತಿದೆ. ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಮೆಡಿಕಲ್ ಕಾಲೇಜನ್ನು ಕೋವಿಡ್ ಆಸ್ಪತ್ರತೆಯಾಗಿ ಮಾರ್ಪಡಿಸಲಾಗಿದ್ದು, ಶೇ 50 ನೇಮಕಾತಿ ತಕ್ಷಣ ನಡೆಯಲಿದ್ದು, ಉಳಿದವನ್ನು ಆಸ್ಪತ್ರೆ ಬ್ಲೋಕ್ ಸಿದ್ಧವಾದ ಸಂದರ್ಭದಲ್ಲಿ ನೇಮಕಾತಿ ಜರುಗಲಿದೆ ಎಂದು ಸಚಿವೆ ತಿಳಿಸಿದರು.
ರಾಜ್ಯದಲ್ಲಿ ಅತ್ಯಧಿಕ ಕೋವಿಡ್ ರೋಗಬಾಧೆಯಿರುವುದು ಕಾಸರಗೋಡು ಜಿಲ್ಲೆಯಲ್ಲಿ. ಕೇರಳದಲ್ಲಿ ಒಟ್ಟು 263 ಕೋವಿಡ್ ರೋಗಿಗಳಿದ್ದು, ಇವರಲ್ಲಿ 131 ಮಂದಿ ಕಾಸರಗೋಡು ಜಿಲ್ಲೆಯಲ್ಲಿದ್ದಾರೆ. ಇದು ಇಡೀ ರಾಜ್ಯದ ರೋಗಿಗಳ ಸಂಖ್ಯೆ ಅಧಾರ್ಂಶವಾಗಿದೆ. ಈ ವಿಶೇಷ ಹಿನ್ನೆಲೆಯಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಒ.ಪಿ.ವಿಭಾಗ ಆರಂಭಿಸಬೇಕಾದ ಅಗತ್ಯ ಪರಿಶೀಲಿಸಿ ರಾಜ್ಯ ಸರಕಾರ ಕಾಸರಗೋಡು ಜಿಲ್ಲೆಗೆ ಹೆಚ್ಚುವರಿ ಮಹತ್ವ ನೀಡುತ್ತಿದೆ. ಇದೇ ಕಾರಣದಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶದಂತೆ 4 ದಿನಗಳಲ್ಲಿ ಕಾಲೇಜಿನ ಅಕಾಡೆಮಿಕ್ ಬ್ಲಾಕ್ ಕೋವಿಡ್ ಆಸ್ಪತ್ರೆ ಸ್ಥಾಪಿಸಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಅವರ ಆದೇಶ ಪ್ರಕಾರ ತುರ್ತು ಸಿಬ್ಬಂದಿ ಎಂಬ ನಿಟ್ಟಿನಲ್ಲಿ 273 ಮಂದಿಯ ನೇಮಕಾತಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವೆ ನುಡಿದರು.
91 ಮಂದಿ ವೈದ್ಯರು, 182 ಮಂದಿ ಶಿಕ್ಷಕೇತರ ಸಿಬ್ಬಂದಿ, 4 ಅಸೊಸಿಯೇಟ್ ಪೆÇ್ರಫೆಸರ್ ಗಳು, 35 ಸಹಾಯಕ ಪೆÇ್ರಫೆಸರ್ ಗಳು, 28 ಸಿನಿಯರ್ ರೆಸಿಡೆಂಟ್, 24 ಜ್ಯೂನಿಯರ್ ರೆಸಿಡೆಂಟ್ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸಿಬ್ಬಂದಿಯ ನೇಮಕಾತಿ ನಡೆಯಲಿದೆ.
ಕೋವಿಡ್ ಆಸ್ಪತ್ರೆಯಲ್ಲಿ 8 ಮಂದಿಯ ದಾಖಲು: ಆರೋಗ್ಯ ಸಚಿವೆ:
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಆರಂಭಿಸಲಾಗಿರುವ ಕೋವಿಡ್ ಆಸ್ಪತ್ರೆಯಲ್ಲಿ 8 ರೋಗಿಗಳನ್ನು ದಾಖಲು ಮಾಡಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿರುವರು.
ಎರಡು ದಿನಗಳ ಹಿಂದೆ ಕೊರೋನಾ ಸೋಂಕು ಖಚಿತಗೊಂಡಿದ್ದ 6 ಮಂದಿಯನ್ನು, ಮಂಗಳವಾರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಕಕಾಲಕ್ಕೆ 200 ಮಂದಿಯನ್ನು ದಾಖಲು ಮಾಡಿ ಚಿಕಿತ್ಸೆ ನೀಡಬಹುದಾದ ಸೌಲಭ್ಯ ಇಲ್ಲಿದೆ. ತಿರುವನಂತಪುರಂನಿಂದ ಆಗಮಿಸಿದ ಪರಿಣತರ ತಂಡದ ನೇತೃತ್ವದಲ್ಲಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿನ ವ್ಯವಸ್ಥೆಗಳು ಕೊರೋನಾ ಚಿಕಿತ್ಸೆಗಾಗಿಯೇ ಸಜ್ಜಾಗಿದ್ದು, ಕೊರೋನಾ ರೋಗಿಗಳನ್ನು ಮಾತ್ರ ದಾಖಲುಮಾಡಲಾಗುತ್ತಿದೆ ಎಂದವರು ತಿಳಿಸಿರುವರು.
ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ, ಕಾಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸುವ ಸೌಲಭ್ಯ ನಡೆಸಲಾಗಿದೆ. ಆರಂಭದಲ್ಲಿ ಈ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ 200 ಮಂದಿಯ ದಾಖಲಾತಿಯ ಚಿಕಿತ್ಸೆ ಸೌಲಭ್ಯವಿದ್ದರೆ, ಈಗ 400 ಮಂದಿಯ ಚಿಕಿತ್ಸೆಗೆ ವ್ಯವಸ್ಥೆ ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಮನೆಗಳಲಿ ನಿಗಾದಲ್ಲಿರುವ ಮಂದಿಯ ಸೋಂಕು ಬಾಧೆ ಖಚಿತಗೊಂಡರೆ ಎಲ್ಲ ಸೌಲಭ್ಯಗಳಿರುವ 108 ಆಂಬುಲೆನ್ಸ್ ಮೂಲಕ ಕೋವಿಡ್ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗುವುದು. ಇದರ ಜೊತೆಗೆ ವೆಂಟಿಲೇಟರ್ ಸೌಲಭ್ಯವಿರುವ 24 ತಾಸೂ ಚಟುವಟಿಕೆ ನಡೆಸುವ ಆಂಬುಲೆನ್ಸ್ ನ ಸೇವೆ ಯೂ ಇದೆ ಎಂದು ನುಡಿದರು.
ತಿರುವನಂತಪುರಂ ನಿಂದ ಆಗಮಿಸಿದ ಪರಿಣತರ ತಂಡ ಮತ್ತು ಕಾಸರಗೋಡಿನ 17 ಮಂದಿಯ ತಂಡ ಇಲ್ಲಿ ಚಿಕಿತ್ಸೆ ನಡೆಸುತ್ತಿದೆ. ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಏಕೀಕರಣದೊಂದಿಗೆ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸಹಾಯಕ ವರಿಷ್ಠಾಧಿಕಾರಿ ಡಾ.ಸಂತೋಷ್ ಕುಮಾರ್ , ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮದಾಸ್, ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ಅವರ ನೇತೃತ್ವದಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದರು.


