ಮಂಜೇಶ್ವರ: ಗಡಿ ಪ್ರದೇಶದಲ್ಲಿ ಚಿಕಿತ್ಸೆ ಲಭಿಸದೆ ಮರಣ ಸಂಖ್ಯೆ ಹನ್ನೆರಡಕ್ಕೆ ತಲುಪಿದ ಬಳಿಕ ಸುಪ್ರೀಂ ಕೋರ್ಟಿನ ಆದೇಶದಂತೆ ಕೆಲವು ಪ್ರಾಮುಕ ಷರತ್ತುಗಳ ಅನ್ವಯ ತುರ್ತು ವೈದ್ಯಕೀಯ ಚಿಕಿತ್ಸೆಗೆ ಕೊನೆಗೂ ತಲಪಾಡಿ ಗಾಡಿಯನ್ನು ತೆರವುಗೊಳಿಸಲಾಗುವುದಾಗಿ . ಕನ್ನಡ ಜಿಲ್ಲಾಡಳಿತ ಸಮ್ಮತಿಯನ್ನು ನೀಡಿದರೂ ಇದೊಂದು ಅಶಾಸ್ತ್ರೀಯ ವಿಧಾನವಾಗಿರುವುದಾಗಿ ಹೇಳಲಾಗುತ್ತಿದೆ .
ಷರತ್ತಿನ ಅನ್ವಯ ಕೇರಳದಿಂದ ಮಂಗಳೂರಿಗೆ ಸಾಗಿಸಲಾಗುತ್ತಿರುವ ರೋಗಿಗಳನ್ನು ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡಲು ಕೇರಳದ ಗಡಿಗೆ ಬುಧವಾರ ಬೆಳಿಗ್ಗೆ ಉನ್ನತ ವೈದ್ಯಕೀಯ ತಂಡ ತಲುಪಿದೆ . ಅದೇ ರೀತಿ ಕರ್ನಾಟಕ ಗಡಿಗೂ ಕರ್ನಾಟಕ ಸರ್ಕಾರದ ಉನ್ನತ ವೈದ್ಯಕೀಯ ತಂಡ ತಲುಪಿದೆ. ಬುಧವಾರ ಬೆಳಿಗ್ಗೆ ಕುಂಜತೂರಿನಿಂದ ಆಗಮಿಸಿದ ಮಧುಮೇಹ ರೋಗಿಯಾದ ಹೈದರ್ ಎಂಬವರ ಕಾಲನ್ನು ಕತ್ತರಿಸಿ ಚಿಕಿತ್ಸೆಯಲ್ಲಿದ್ದು ಇದೀಗ ಅಲ್ಪ ದಿವಸಗಳಿಂದ ಗಾಯ ಪುನಃ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಮಂಗಳೂರಿಗೆ ತೆರಳಲು ಗಡಿಯಲ್ಲಿ ನೀಡಲಿಲ್ಲ.
ವೈದ್ಯಕೀಯ ಚಿಕಿತ್ಸೆಗೆ ಬರು ರೋಗಿ ನಾನ್ ಕೋವಿಡ್ ಎಂಬುದನ್ನು ಕೂಡಲೇ ದೃಢೀಕರಿಸುವ ಅಗತ್ಯ ಇದ್ದು ಆದರೆ ಅದು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ. ತುರ್ತು ಚಿಕಿತ್ಸೆ ಗೆ ಆಗಮಿಸುವ ರೋಗಿ ಗಡಿ ಪ್ರದೇಶದಿಂದ ಪ್ರಮಾಣ ಪತ್ರವನ್ನು ಪಡೆಯುವ ಮಧ್ಯೆ ಸಾವು ಸಂಭವಿಸುವ ಸಾಧ್ಯತೆ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರೋಗಿಗಳನ್ನು ಕಳುಹಿಸಲು ಮುಂದಿಟ್ಟ ಬೇಡಿಕೆಯಿಂದಾಗಿ ಯಾವುದೇ ರೋಗಿಯನ್ನು ಕಳುಹಿಸಲು ಅಸಾಧ್ಯವಾಗುವ ಬಗ್ಗೆ ವ್ಯಾಪಕವಾದ ವಿಮರ್ಶೆಗಳು ಕೇಳಿ ಬರುತ್ತಿವೆ. ಸುಪ್ರೀಂ ಕೋರ್ಟಿನ ವಿಧಿ ಗಡಿ ಪ್ರದೇಶದ ಜನರಲ್ಲಿ ಅಲ್ಪ ಸಮಾಧಾನವನ್ನು ತಂದಿದ್ದರೂ ಕರ್ನಾಟಕದ ಷರತ್ತುಗಳಿಂದ ಸುಪ್ರೀಂ ಕೋರ್ಟಿನ ವಿಧಿ ಪ್ರಯೋಜನವಿಲ್ಲದಂತಾಗಿದೆ.


