ಕಾಸರಗೋಡು: ಜಿಲ್ಲೆಯಲ್ಲಿ ಮೊಬೈಲ್ ಅಂಗಡಿಗಳು ಭಾನುವಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆಯಬೇಕು ಎಂದು ಜಿಲ್ಲಾಧಿಕರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವರ್ಕ್ ಶಾಪ್ ಗಳು ವಾರಕ್ಕೆ 2 ದಿನ ತೆರೆಯಲಿವೆ. ಭಾನುವಾರ, ಗುರುವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಇವು ಕಾರ್ಯಾಚರಿಸಲಿದ್ದು, ಸ್ಪೇರ್ ಪಾಟ್ರ್ಸ್ ಅಂಗಡಿಗಳೂ ಆ ದಿನಗಳಲ್ಲಿ ತೆರೆದು ಕಾರ್ಯಾಚರಿಸಲು ಮಂಜೂರಾತಿ ನೀಡಲಾಗುವುದು. ಫ್ಯಾನ್, ಏರ್ ಕಂಡೀಷನರ್ ಇತ್ಯಾದಿ ಖರೀದಿಗೆ ವಾರದಲ್ಲಿ ಒಂದು ದಿನ ಸಂಬಂಧಿತ ಅಂಗಡಿಗಳು ತೆರೆಯುವ ವಿಚಾರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ನೋಂದಣಿ ಹೊಂದಿರುವ ಇಲೆಕ್ಟ್ರೀಶಿಯನ್ ಗಳು ಮನೆಗಳಿಗೆ ತೆರಳಿ ದುಸರ್ತಿ ಕಾಮಗಾರಿ ನಡೆಸಲು ಅಭ್ಯಂತರವಿಲ್ಲ. ಫ್ಲಾಟ್ ಗಳಲ್ಲಿ ಕೇಂದ್ರೀಕೃತ ಸೌಲಭ್ಯಗಳಿವೆ. ಅಲ್ಲಿ ದುರಸ್ತಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿರುವರು.


