ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಸೋಂಕು ಪತ್ತೆ ಹಚ್ಚುವ ಸಲುವಾಗಿ ಚೀನಾದಿಂದ ತರಸಿಕೊಂಡಿದ್ದ ರ್ಯಾಪಿಡ್ ಆಂಟಿ ಬಾಡಿ ಪರೀಕ್ಷಾ ಕಿಟ್ ಗಳು ದೋಷಪೂರಿತವಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತು ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ತನಿಖೆ ಕೈಗೊಂಡಿದೆ.
ಚೀನಾದಿಂದ ತರಿಸಿಕೊಂಡಿರುವ ಪರೀಕ್ಷಾ ಕಿಟ್ ಗಳ ಪೈಕಿ ಎರಡು ಕಂಪನಿಗಳ ಕಿಟ್ ಗಳು ಸರಿಯಾಗಿ ಫಲಿತಾಂಶ ಮತ್ತು ವ್ಯತ್ಯಾಸಗಳಿಂದ ಕೂಡಿದ್ದು ಈ ಹಿನ್ನೆಲೆಯಲ್ಲಿ ಐಸಿಎಂಆರ್ ಈ ಬಗ್ಗೆ ತನಿಖೆ ಕೈಗೊಂಡಿದ್ದು ಇನ್ನು ಎರಡು ದಿನಗಳ ಕಾಲ ತನಿಖೆ ಪೂರ್ಣಗೊಳ್ಳುವವರೆಗೂ ಈ ಪರೀಕ್ಷಾ ಕಿಟ್ ಗಳ ಬಳಕೆ ಮಾಡುವುದು ಬೇಡ ಎಂದು ರಾಜ್ಯಗಳಿಗೆ ಮನವಿ ಮಾಡಿದೆ. 7 ಲಕ್ಷ ಕಿಟ್ ಗಳು ಚೀನಾದ ಈ ಎರಡೂ ಕಂಪನಿಗಳಿಂದ ಬಂದಿದ್ದು ಇವುಗಳು ದೋಷಪೂರಿತವಾಗಿದೆ ಎಂದು ದೂರು ಕೇಳಿಬಂದಿದೆ. ಇನ್ನು ಏರ್ ಇಂಡಿಯಾ ಮತ್ತು ಇತರ ವಾಣಿಜ್ಯ ಭಾರತೀಯ ಜೆಟ್ ಲೈನರ್ ಗಳ ಮೂಲಕ ಈ ಕಿಟ್ ಗಳನ್ನು ಚೀನಾದಿಂದ ತರಿಸಿಕೊಳ್ಳಲಾಗಿತ್ತು.
ದೋಷಪೂರಿತ ಕಿಟ್ ಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ರಾಯಭಾರ ಕಚೇರಿ ರಫ್ತಾಗಿರುವ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟಕ್ಕೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಸಂಬಂಧ ಭಾರತೀಯ ಏಜೆನ್ಸಿಯೊಂದಿಗೆ ಸಂವಹನ ನಡೆಸುತ್ತದೆ ಮತ್ತು ಅಗ್ಯ ನೆರವು ನೀಡುತ್ತೆದ ಎಂದು ಟ್ವೀಟ್ ಮಾಡಿದೆ.


