ಕಾಸರಗೋಡು: ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ಮಂದಿ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ 17 ಮಂದಿ, ಕಣ್ಣೂರು-6, ಕಲ್ಲಿಕೋಟೆ-2, ಎರ್ನಾಕುಳಂ ಮತ್ತು ತೃಶ್ಶೂರು ಜಿಲ್ಲೆಯಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ ಒಟ್ಟು 124 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಈ ವರೆಗೆ 24 ಮಂದಿ ಗುಣಮುಖರಾಗಿದ್ದಾರೆಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಹೇಳಿದ್ದಾರೆ.
ರಾಜ್ಯದಲ್ಲಿ ಶುಕ್ರವಾರ ಒಟ್ಟು 7 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಕಾಸರಗೋಡಿನಲ್ಲಿ 3, ಕಣ್ಣೂರು ಮತ್ತು ಮಲಪ್ಪುರಂ ತಲಾ 2 ರಂತೆ ಬಾ„ಸಿದೆ. ಇದರಲ್ಲಿ ಮಲಪ್ಪುರಂ ಜಿಲ್ಲೆಯ ಇಬ್ಬರು ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರು. ಕಾಸರಗೋಡು(3) ಮತ್ತು ಕಣ್ಣೂರು(2) ಜಿಲ್ಲೆಯ ಒಟ್ಟು ಐವರು ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ರೋಗ ಬಾ„ಸಿದೆ.
ಆಲಪ್ಪುಳದಲ್ಲಿ - 2, ಎರ್ನಾಕುಳಂ-14, ಇಡುಕ್ಕಿ - 7, ಕಣ್ಣೂರು - 37, ಕಾಸರಗೋಡು - 24, ಕೊಲ್ಲಂ - 2, ಕೋಟ್ಟಯಂ - 3, ಕಲ್ಲಿಕೋಟೆ - 6, ಮಲಪ್ಪುರಂ - 4, ಪತ್ತನಂತಿಟ್ಟ - 8, ತಿರುವನಂತಪುರ - 8, ತೃಶ್ಶೂರು - 7, ವಯನಾಡು - 2 ಎಂಬಂತೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರಲ್ಲಿ 8 ಮಂದಿ ವಿದೇಶಿಯರೂ ಸೇರ್ಪಡೆಗೊಂಡಿದ್ದಾರೆ. 7 ಮಂದಿ ವಿದೇಶಿಯರು ಎರ್ನಾಕುಳಂ ಮೆಡಿಕಲ್ ಕಾಲೇಜಿನಲ್ಲೂ, ಒಬ್ಬರು ತಿರುವನಂತಪುರ ಮೆಡಿಕಲ್ ಕಾಲೇಜಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕೇರಳದಲ್ಲಿ ಈ ವರೆಗೆ ಒಟ್ಟು 364 ಮಂದಿಗೆ ರೋಗ ದೃಢೀಕರಿಸಿದ್ದು, ಇದೀಗ ವಿವಿಧ ಆಸ್ಪತ್ರೆಗಳಲ್ಲಿ 238 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1,29,751 ಮಂದಿ ನಿಗಾದಲ್ಲಿದ್ದು, ಅವರಲ್ಲಿ 1,29,0221 ಮಂದಿ ಮನೆಗಳಲ್ಲೂ, 730 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಶುಕ್ರವಾರ ರಾಜ್ಯದಲ್ಲಿ ಒಟ್ಟು 126 ಮಂದಿಯನ್ನು ದಾಖಲಿಸಲಾಗಿದೆ. ರೋಗ ಲಕ್ಷಣಗಳಿರುವ 13,339 ವ್ಯಕ್ತಿಗಳ ಸ್ಯಾಂಪಲ್ ಪರಿಶೀಲನೆಗೆ ಕಳುಹಿಸಲಾಗಿದೆ. ಇದರಲ್ಲಿ 12,335 ಸ್ಯಾಂಪಲ್‍ಗಳು ನೆಗೆಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಮೂರು ಮಂದಿಗೆ ಕೋವಿಡ್ 19 ಸೋಂಕು ಖಚಿತಗೊಂಡಿದೆ. ಮುಳಿಯಾರು ಗ್ರಾಮ ಪಂಚಾಯತ್‍ನ ಪೆÇವ್ವಲ್ ನಿವಾಸಿಗಳಾಗಿರುವ 52 ಮತ್ತು 24 ವರ್ಷದ ಇಬ್ಬರು ಮಹಿಳೆಯರಿಗೆ, ಕಾಸರಗೋಡು ನಗರಸಭೆಯ ತಳಂಗರೆ ನಿವಾಸಿ 17 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾ„ಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು.
2017 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1271 ಮಂದಿಯ ಸ್ಯಾಂಪಲ್ ನೆಗೆಟಿವ್ ಆಗಿದೆ. 568 ಮಂದಿಯ ಫಲಿತಾಂಶ ಲಭಿಸಿಲ್ಲ. ಜಿಲ್ಲೆಯಲ್ಲಿ ಈ ವರೆಗೆ 10721 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10461 ಮಂದಿ ಆಸ್ಪತ್ರೆಗಳಲ್ಲಿ, 260 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ ನೂತನವಾಗಿ 20 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ಜಿಲ್ಲೆಯ 136 ಮಂದಿ ಈ ಬಾಧೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 160 ಮಂದಿಗೆ ಸೋಂಕು ಖಚಿತವಾಗಿದೆ. ಈ ವರೆಗೆ 24 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 55 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 55 ಕೇಸು ದಾಖಲಿಸಲಾಗಿದೆ. 97 ಮಂದಿಯನ್ನು ಬಂ„ಸಲಾಗಿದೆ. 25 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 5, ಕುಂಬಳೆ 4, ಕಾಸರಗೋಡು 2, ವಿದ್ಯಾನಗರ 5, ಬದಿಯಡ್ಕ 4, ಆದೂರು 2, ಬೇಡಗಂ 1, ಮೇಲ್ಪರಂಬ 9, ಬೇಕಲ 2, ಹೊಸದುರ್ಗ 1, ನೀಲೇಶ್ವರ 1, ಚಂದೇರ 6, ಚೀಮೇನಿ 2, ವೆಳ್ಳರಿಕುಂಡ್ 4, ಚಿತ್ತಾರಿಕಲ್ 4, ರಾಜಪುರಂ 3 ಕೇಸುಗಳು ದಾಖಲಾಗಿವೆ. ಈ ವರೆಗೆ ಜಿಲ್ಲೆಯಲ್ಲಿ 660 ಕೇಸುಗಳು ದಾಖಲಾಗಿವೆ. 1065 ಮಂದಿಯನ್ನು ಬಂಧಿಸಲಾಗಿದೆ. 404 ವಾಹನಗಳನ್ನು ವಶಪಡಿಸಲಾಗಿದೆ.
ಮಾಲೋಂ ಕಸಬ ಶಾಲೆಗೆ ಭೇಟಿ: ಜಿಲ್ಲೆಯಲ್ಲಿ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಏಕೀಕರಣ ಹೊಣೆಗಾರಿಕೆಯ ವಿಶೇಷ ಅಧಿಕಾರಿ ಅಲ್ಕೇಷ್ ಕುಮಾರ್ ಶರ್ಮ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಶುಕ್ರವಾರ ವೆಸ್ಟ್ ಏಳೇರಿ ಗ್ರಾಮ ಪಂಚಾಯತ್‍ನ ಮಾಲೋಂ ಕಸಬ ಶಾಲೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರಿಗಾಗಿ ಸಿದ್ಧಪಡಿಸಲಾದ ಸೌಲಭ್ಯ ಕೇಂದ್ರಕ್ಕೆ ಭೇಟಿ ನೀಡಿದರು. ವಿಶೇಷ ಸಮುದಾಯ ಅಡುಗೆ ಮನೆ, ಇತರ ರಾಜ್ಯಗಳ ಕಾರ್ಮಿಕರ ವಸತಿ ಸಹಿತ ಸೌಲಭ್ಯಗಳು ಇಲ್ಲಿವೆ. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್, ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ವಿ.ಕುಂಞÂಕಣ್ಣನ್, ಲೈಸನ್ ಅಧಿಕಾರಿ ತುಳಸೀಧರನ್ ಜತೆಗಿದ್ದರು. ಜಾರ್ಖಂಡ್, ಬಿಹಾರ, ರಾಜಸ್ಥಾನ, ಅಸ್ಸಾಂ, ಪಶ್ಚಿಮ ಬಂಗಾಳಗಳ ಮೂಲ ನಿವಾಸಿಗಳಾದ ನೂರಾರು ಮಂದಿ ಇಲ್ಲಿ ಆಸರೆ ಪಡೆದಿದ್ದಾರೆ. ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಇವರಿಗೆ ಈ ವ್ಯವಸ್ಥೆ ಏರ್ಪಡಿಸಿವೆ.


