HEALTH TIPS

ಲಾಕ್ ಡೌನ್, ನಿಬರ್ಂಧ ಸಡಿಲಿಕೆ ಮಾಡದಿದ್ದಲ್ಲಿ ಮೇ ಅಂತ್ಯದ ವೇಳೆಗೆ 4 ಕೋಟಿ ಜನರ ಕೈಲಿ ಮೊಬೈಲ್ ಇರಲ್ವಂತೆ!

 
       ನವದೆಹಲಿ: ಲಾಕ್ ಡೌನ್ ಪರಿಣಾಮ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಸ್ಥಗಿತಗೊಂಡಿದ್ದು, ಮೇ.03 ರ ನಂತರ ಲಾಕ್ ಡೌನ್ ತೆರವುಗೊಳಿಸದೇ ಇದ್ದರೆ ಮೇ ತಿಂಗಳಾಂತ್ಯಕ್ಕೆ 4 ಕೋಟಿ ಜನರ ಕೈಲಿ ಮೊಬೈಲ್ ಇರುವುದಿಲ್ಲ ಎಂದು ಐಸಿಇಎ ಹೇಳಿದೆ.
      ಮಾಹಿತಿಯ ಪ್ರಕಾರ, ಮೊಬೈಲ್ ಫೆÇೀನ್ ಗಳು ಹಾಳಾಗಿ, ಮುರಿದುಹೋಗಿರುವ ಪರಿಣಾಮ ಈಗಾಗಲೇ 2.5 ಕೋಟಿ ಗ್ರಾಹಕರ ಕೈಲಿ ಮೊಬೈಲ್ ಇಲ್ಲದಂತಾಗಿದೆ ಎಂದು ಇಂಡಿಯಾ ಸೆಲ್ಯುಲರ್, ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. ಮೊಬೈಲ್ ದುರಸ್ತಿಗಳಿಗಾಗಿ ಅಗತ್ಯವಿರುವ ಕಾಂಪೆÇನೆಂಟ್ ಗಳು ಲಭ್ಯವಾಗುತ್ತಿಲ್ಲ, ಇತ್ತ ಹೊಸ ಮೊಬೈಲ್ ಗಳನ್ನು ಖರೀದಿಸಲೂ ಲಾಕ್ ಡೌನ್ ನಿಂದ ಸಾಧ್ಯವಾಗುತ್ತಿಲ್ಲ ಪರಿಣಾಮವಾಗಿ ಲಾಕ್ ಡೌನ್ ತೆರವುಗೊಳಿಸದೇ ಇದ್ದಲ್ಲಿ ಮೇ ತಿಂಗಳಾಂತ್ಯಕ್ಕೆ ಮೊಬೈಲ್ ಇಲ್ಲದೇ ಇರುವವರ ಸಂಖ್ಯೆ 4 ಕೋಟಿಗೆ ತಲುಪಲಿದೆ ಎಂದು ಐಸಿಇಎ ಅಂದಾಜಿಸಿದೆ.  ಲಾಕ್ ಡೌನ್ ವೇಳೆಯಲ್ಲಿ ಟೆಲಿಕಾಂ, ಇಂಟರ್ ನೆಟ್, ಐಟಿ ಸೇವೆಗಳು ಮಾತ್ರ ಲಭ್ಯವಿದ್ದು ಮೊಬೈಲ್ ಹ್ಯಾಂಡ್ ಸೆಟ್ ಗಳ ಮಾರಾಟಕ್ಕೆ ಅನುಮತಿ ನೀಡಲಾಗಿಲ್ಲ.
      ಐಸಿಇಎ ಮಾಹಿತಿಯ ಪ್ರಕಾರ ಆಪಲ್, ಶಿಯೋಮಿ ಸೇರಿದಂತೆ ಮುಂಚೂಣಿಯಲ್ಲಿರುವ ಮೊಬೈಲ್ ಸಂಸ್ಥೆಗಳು ಪ್ರತಿ ತಿಂಗಳು 2.5 ಕೋಟಿ ಹೊಸ ಮೊಬೈಲ್ ಫೆÇೀನ್ ಗಳನ್ನು ಮಾರಾಟ ಮಾಡುತ್ತಿದ್ದವು.ಈ ಪೈಕಿ ಹೆಚ್ಚಿನವು ಹಳೆಯ ಮೊಬೈಲ್ ಹಾಳಾದ ಕಾರಣ ಖರೀದಿಸಲ್ಪಡುತ್ತಿದ್ದ ಹೊಸ ಮೊಬೈಲ್ ಗಳಾಗಿರುತ್ತಿದ್ದವು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries