ಮುಂಬೈ: ಮುಂಬೈ ನಲ್ಲಿ ಕನಿಷ್ಟ 53 ಪತ್ರಕರ್ತರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಮುಂಬೈ ನ ಮಹಾನಗರ ಪಾಲಿಕೆ ಹೇಳಿದೆ.
ಆಜಾದ್ ಮೈದಾನದಲ್ಲಿ ಏ.16-17 ರಂದು ಆಯೋಜಿಸಲಾಗಿದ್ದ ವಿಶೇಷ ಕ್ಯಾಂಪ್ ನಲ್ಲಿ ಪತ್ರಕರ್ತರಿಗೆ ಕೊರೋನಾ ವೈರಸ್ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಬೃಹತ್ ಮುಂಬೈ ಮುನ್ಸಿಪಲ್ ಕಾಪೆರ್Çರೇಷನ್ 171 ಮಾಧ್ಯಮಗಳ ಪ್ರತಿನಿಧಿಗಳ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಈ ಪೈಕಿ 53 ಪತ್ರಕರ್ತರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಬಿಎಂಸಿ ವಕ್ತಾರ ವಿಜಯ್ ಖಬಾಲೆ ಹೇಳಿದ್ದಾರೆ.
53 ಮಂದಿ ಪೈಕಿ ಬಹುತೇಕ ವ್ಯಕ್ತಿಗಳಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ, ಸೋಂಕು ತಗುಲಿದ್ದವರನ್ನು ಐಸೊಲೇಷನ್ ನಲ್ಲಿರಿಸಲಾಗಿದೆ. ಅವರ ಸಂಪರ್ಕಗಳನ್ನು ಶೋಧಿಸಲಾಗುತ್ತಿದೆ ಎಂದು ಬಿಎಂಸಿ ಹೇಳಿದೆ.


