ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಇದೇ ವೇಳೆ ಆರು ಮಂದಿ ಗುಣಮುಖರಾಗಿದ್ದಾರೆ. ಇವರಲ್ಲಿ 4 ಮಂದಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಿಂದ, ಇಬ್ಬರು ಕಾಂಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ ಸೋಂಕು ಖಚಿತಗೊಂಡಿದ್ದ 152 ಮಂದಿ ಗುಣಮುಖರಾಗಿದ್ದಾರೆ. ಈಗ ಜಿಲ್ಲೆಯಲ್ಲಿ 20 ಮಂದಿ ಕೋವಿಡ್ ಪಾಸಿಟಿವ್ ಕೇಸುಗಳಿವೆ. ಜಿಲ್ಲೆಯಲ್ಲಿ ಗುರುವಾರ 3126 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3070, ಆಸ್ಪತ್ರೆಗಳಲ್ಲಿ 56 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ಇಬ್ಬರನ್ನು ನೂತನವಾಗಿ ಐಸೊಲೇಷನ್ ವಾರ್ಡ್‍ಗಳಿಗೆ ದಾಖಲಿಸಲಾಗಿದೆ. ನಿಗಾದಲ್ಲಿದ್ದ 625 ಮಂದಿ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 3503 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 2710 ಮಂದಿಯ ಸ್ಯಾಂಪಲ್ ಫಲಿತಾಂಶ ನೆಗೆಟಿವ್ ಆಗಿದೆ. 488 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ರಾಜ್ಯದಲ್ಲಿ 10 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಗುರುವಾರ ಒಟ್ಟು 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಒಟ್ಟು ಎಂಟು ಮಂದಿ ಗುಣಮುಖರಾಗಿದ್ದಾರೆ. ಇಡುಕ್ಕಿ-4, ಕಲ್ಲಿಕೋಟೆ-2, ಕೋಟ್ಟಯಂ-2, ಕೊಲ್ಲಂ-1 ಮತ್ತು ತಿರುವನಂತಪುರ-1 ಎಂಬಂತೆ ಕೊರೊನಾ ವೈರಸ್ ಸೋಂಕು ವರದಿಯಾಗಿದೆ. ಗುಣಮುಖರಾದ 8 ಮಂದಿಯ ಪೈಕಿ ಕಾಸರಗೋಡು ಜಿಲ್ಲೆಯಲ್ಲಿ 6 ಮಂದಿ, ಮಲಪ್ಪುರ ಮತ್ತು ಕಣ್ಣೂರು ತಲಾ ಒಂದರಂತೆ ಗುಣಮುಖರಾಗಿದ್ದಾರೆ. ಗುರುವಾರ ಸೋಂಕಿತರ ಪೈಕಿ 4 ಮಂದಿ ಅನ್ಯ ರಾಜ್ಯದಿಂದ ಬಂದವರು, ಇಬ್ಬರು ವಿದೇಶದಿಂದ ಬಂದವರು ಮತ್ತು 4 ಮಂದಿಗೆ ಸಂಪರ್ಕದಿಂದ ಸೋಂಕು ಹರಡಿದೆ. ಈ ವರೆಗೆ ರಾಜ್ಯದಲ್ಲಿ 447 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಪ್ರಸ್ತುತ 129 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 148 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 23876 ಮಂದಿ ನಿಗಾದಲ್ಲಿದ್ದು, ಈ ಪೈಕಿ 23439 ಮಂದಿ ಮನೆಗಳಲ್ಲೂ, 437 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಈ ತನಕ 21334 ಸ್ಯಾಂಪಲ್‍ಗಳನ್ನು ಲ್ಯಾಬ್‍ಗೆ ಕಳುಹಿಸಲಾಗಿದ್ದು, ಲಭ್ಯ 20326 ಸ್ಯಾಂಪಲ್ ಫಲಿತಾಂಶ ನೆಗೆಟಿವ್ ಆಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಮತ್ತು ಮಲಪ್ಪುರ ಜಿಲ್ಲೆಗಳು ರೆಡ್ ಝೋನ್ ಆಗಿಯೇ ಮುಂದುವರಿಯಲಿದ್ದು, ಉಳಿದ 10 ಜಿಲ್ಲೆಗಳು ಆರೆಂಜ್ ಝೋನ್ ಆಗಿದೆ. ಮೇಲಿನ ನಾಲ್ಕು ಜಿಲ್ಲೆಗಳಲ್ಲಿ ಬಿಗು ನಿಯಂತ್ರಣ ಮುಂದುವರಿಯಲಿದೆ.
148 ಕೇಸು ದಾಖಲು :
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 148 ಕೇಸುಗಳನ್ನು ದಾಖಲಿಸಲಾಗಿದೆ. 51 ಮಂದಿಯನ್ನು ಬಂ„ಸಲಾಗಿದ್ದು, 19 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3, ಕುಂಬಳೆ 3, ಕಾಸರಗೋಡು 68, ವಿದ್ಯಾನಗರ 22, ಬದಿಯಡ್ಕ 5, ಬೇಡಗಂ 1, ಅಂಬಲತ್ತರ 2, ಬೇಕಲ 4, ಹೊಸದುರ್ಗ 3, ನೀಲೇಶ್ವರ 3, ಚಂದೇರ 12, ಚಿತ್ತಾರಿಕಲ್ 5, ವೆಳ್ಳರಿಕುಂಡ್ 3, ರಾಜಪುರಂ 4, ಮೇಲ್ಪರಂಬ 34, ಚೀಮೇನಿ 1, ಆದೂರು 2 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 1620 ಕೇಸುಗಳನ್ನು ದಾಖಲಿಸಲಾಗಿದ್ದು, 1915 ಮಂದಿಯನ್ನು ಬಂ„ಸಲಾಗಿದ್ದು, 649 ವಾಹನಗಳನ್ನು ವಶಪಡಿಸಲಾಗಿದೆ.
ಮಂಜೇಶ್ವರದಲ್ಲಿ ವಾಹನಗಳ ರೋಗಾಣು ಮುಕ್ತ ಸೌಲಭ್ಯ ಆರಂಭ : ಮೋಟಾರು ವಾಹನ ಇಲಾಖೆಯ ಕಾಸರಗೋಡು ಆರ್.ಟಿ.ಒ. ವಿಭಾಗ ಮತ್ತು ಪಯ್ಯನ್ನೂರು ರಾಟರಿ ಕ್ಲಬ್ ರಾಜ್ಯದ ಗಡಿ ಪ್ರದೇಶ ಮಂಜೇಶ್ವರದಲ್ಲಿ ವಾಹನಗಳನ್ನು ರೋಗಾಣು ಮುಕ್ತವಾಗಿಸುವ ಸೌಲಭ್ಯ ಆರಂಭಿಸಿದೆ. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ರಸ್ತೆ ಸಾರಿಗೆ ಅ„ಕಾರಿ ಎಸ್.ಮನೋಜ್, ಎನ್‍ಫೆÇೀರ್ಸ್‍ಮೆಂಟ್ ಆರ್.ಟಿ.ಒ. ಮೋಹನದಾಸ್, ಮೋಟಾರು ವೆಹಿಕಲ್ ಇನ್ಸ್‍ಪೆಕ್ಟರ್ ವೈಕುಂಠನ್, ಪಯ್ಯನ್ನೂರು ರಾಟರಿ ಕ್ಲಬ್ ಅಧ್ಯಕ್ಷ ನರೇಂದ್ರ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
3 ಲಕ್ಷ ರೂ. ದೇಣಿಗೆ ನೀಡಿದ ಕೃಷಿಕ : ದೇಲಂಪಾಡಿ ಗ್ರಾಮ ಪಂಚಾಯತ್‍ನ ಅಡೂರು ಗ್ರಾಮದ ಮಳಕ್ಕಿಲ ನಿವಾಸಿ, ಕೃಷಿಕ ಎ.ಬಿ.ಅಹಮ್ಮದ್ ಆಲಿ ಮುಖ್ಯಮಂತ್ರಿ ವಿಪತ್ತು ನಿವಾರಣೆ ನಿ„ಗೆ 3 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಆಲಿ ಅವರ ವಿನಂತಿಯ ಮೇರೆಗೆ ಅಡೂರು ಗ್ರಾಮಾಧಿಕಾರಿ ಬಿಂದು ಅವರು ಆಲಿ ಅವರ ಮನೆಗೆ ತೆರಳಿ ಚೆಕ್ ಪಡೆದು ಕೊಂಡರು.
ಕ್ರಿಯಾ ದಾಖಲೆಗಳ ಬಿಡುಗಡೆ :
ಕೋವಿಡ್ 19 ಪ್ರತಿರೋಧ ಅಂಗವಾಗಿ ಜಿಲ್ಲೆಯಲ್ಲಿ ನಡೆಸಲಾದ ಕ್ರಿಯಾ ದಾಖಲೆಗಳ ಪ್ರಕಟಣೆ ಗುರುವಾರ ಜರುಗಿತು. ಜಿಲ್ಲಾಡಳಿತೆ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಚಟುವಟಿಕೆಗಳ ಕ್ರಿಯಾ ದಾಖಲೆ ಬಿಡುಗಡೆಗೊಂಡಿದೆ.
ಜಾನುವಾರುಗಳ ತಿನಿಸಿಗೆ ಆರ್ಥಿಕ ಸಹಾಯ : ಕೋವಿಡ್ 19 ಕಾರಣದಿಂದ ನಿಗಾದಲ್ಲಿ ಯಾ ಚಿಕಿತ್ಸೆಯಲ್ಲಿರುವ ಕೃಷಿಕರ ಜಾನುವಾರುಗಳಿಗೆ ತಿನಿಸು ವೆಚ್ಚ ಸಂಬಂಧ ರಾಜ್ಯ ಮೃಗ ಸಂರಕ್ಷಣೆ ಇಲಾಖೆ ಆರ್ಥಿಕ ಸಹಾಯ ನೀಡಲಿದೆ. ಆಸಕ್ತರು ವಾರ್ಡ್ ನಂಬ್ರ ಮೂಲಕ ವೆಟರ್ನರಿ ಸರ್ಜನ್/ಲೈವ್ ಸ್ಟಾಕ್ ಇನ್ಸ್‍ಪೆಕ್ಟರ್ ಅವರಿಗೆ ದೂರವಾಣಿ ಮೂಲಕ ಎ.25ರ ಮುಂಚಿತವಾಗಿ ಮಾಹಿತಿ ನೀಡಬೇಕು. ಆರ್ಥಿಕ ಸಹಾಯ ರೂಪದಲ್ಲಿ ಮೇಕೆಯೊಂದಕ್ಕೆ 1400 ರೂ., ಹಸು/ಎಮ್ಮೆಗೆ 2800 ರೂ. ಗರಿಷ್ಟ ಮಟ್ಟದಲ್ಲಿ ಲಭಿಸಲಿದೆ.
ಹಾಟ್ ಸ್ಪಾಟ್‍ಗಳಲ್ಲಿ ಲಾಕ್‍ಡೌನ್ ಆದೇಶ ಕಡ್ಡಾಯವಾಗಿಯೇ ಮುಂದುವರಿಯಲಿದೆ : ಕೋವಿಡ್ 19 ರೋಗ ಹೆಚ್ಚಳ ಹಿನ್ನೆಲೆಯಲ್ಲಿ ರೆಡ್ ಝೋನ್ ಆಗಿ ಘೋಷಿಸಲಾದ ಕಾಸರಗೋಡು ಜಿಲ್ಲೆಯ ಹಾಟ್‍ಸ್ಪಾಟ್ ಆಗಿರುವ 6 ಗ್ರಾಮ ಪಂಚಾಯತ್‍ಗಳಲ್ಲಿ ಮತ್ತು 2 ನಗರಸಭೆಗಳಲ್ಲಿ ಲಾಕ್‍ಡೌನ್ ಆದೇಶ ಕಠಿಣ ರೂಪದಲ್ಲೇ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಪ್ರದೇಶಗಳಲ್ಲಿ ನಿಗಾ ಬಿಗುವಾಗಿ ಮುಂದುವರಿಯಲಿದೆ. ಸಿ.ಆರ್.ಪಿ.ಸಿ. 144 ಪ್ರಕಾರ ಮಾ.22 ರಿಂದ ಜಿಲ್ಲೆಯಲ್ಲಿ ಘೋಷಿಸಲಾದ ನಿಷೇದಾಜ್ಞೆ ಕಡ್ಡಾಯವಾಗಿಯೇ ಮುಂದುವರಿಯಲಿದೆ. 5 ಮಂದಿಗಿಂತ ಅ„ಕ ಮಂದಿ ಗುಂಪು ಸೇರಕೂಡದು. ಕಾಸರಗೋಡು, ಕಾಂಞಂಗಾಡ್ ನಗರಸಭೆಗಳಲ್ಲಿ, ಚೆಮ್ನಾಡ್, ಮುಳಿಯಾರು, ಚೆಂಗಳ, ಮೊಗ್ರಾಲ್ ಪುತ್ತೂರು, ಉದುಮ, ಮಧೂರು ಗ್ರಾಮ ಪಂಚಾಯತ್‍ಗಳನ್ನು ಆರೋಗ್ಯ ಇಲಾಖೆ ಹಾಟ್‍ಸ್ಪಾಟ್‍ಗಳಾಗಿ ಘೋಷಿಸಿದೆ. ಈ ಪ್ರದೇಶಗಳಲ್ಲಿ ಯಾವುದೇ ವಿನಾಯಿತಿಗಳಿಲ್ಲ. ಹಾಟ್ ಸ್ಪಾಟ್‍ಗಳಲ್ಲದ ಪಂಚಾಯತ್‍ಗಳಲ್ಲಿ ಕೃಷಿ, ನಿರ್ಮಾಣ, ಶುಚೀಕರಣ ಇತ್ಯಾದಿಗಳಲ್ಲಿ ರಾಜ್ಯ ಸರಕಾರದ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಪುನರಾರಂಭಿಸಲು ಸಭೆ ತೀರ್ಮಾನ ಕೈಗೊಂಡಿದೆ. ನೀರಾವರಿ ಯೋಜನೆಗಳು, ಕುಡಿಯುವ ನೀರು ಯೋಜನೆಗಳು, ಸರಕಾರಿ ಯೋಜನೆಗಳ ಅಂಗವಾಗಿ ಕಟ್ಟಡ ನಿರ್ಮಾಣ, ಲೋಕೋಪ ಯೋಗಿ ಇಲಾಖೆಯ ಯೋಜನೆಗಳು ಇದರಲ್ಲಿ ಸೇರಿವೆ. ಕೃಷಿ ಚಟುವಟಿಕೆಗಳನ್ನು ಪುನರಾರರಂಭಿಸಲು ನಿರ್ಧರಿಸಲಾಗಿದೆ.


