ಮಂಗಳೂರು: ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಲಾಕ್ ಡೌನ್ ನಿಯಮ ಮುರಿದು ಕೇರಳದಿಂದ ಕರ್ನಾಟಕಕ್ಕೆ ಆಗಮಿಸಿದ್ದ 7 ಮಂದಿಯ ವಿರುದ್ಧ ಮಂಗಳೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ ಮತ್ತು ಕೇರಳದ ಗಡಿ ಭಾಗ ತಲಪಾಡಿ ಮೂಲಕ ಕರ್ನಾಟಕಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದ ಒಂದೇ ಕುಟುಂಬದ ಏಳು ಮಂದಿ ವಿರುದ್ಧ ಇದೀಗ ಮಂಗಳೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಮೂಲಗಳ ಪ್ರಕಾರ 48 ವರ್ಷದ ಯಾಕೂಬ್ ಎಂಬಾತ ಮತ್ತು ಆತನ ಕುಟುಂಬ ಸಮುದ್ರ ಮಾರ್ಗವಾಗಿ ತಲಪಾಡಿಗೆ ಬಂದಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಮಂಗಳೂರು ಪೆÇಲೀಸರು ಯಾಕೂಬ್ ಮತ್ತು ಅವರಿಗೆ ಸಮುದ್ರ ಮಾರ್ಗದಲ್ಲಿ ಬರಲು ನೆರವು ನೀಡಿದ್ದ ಶಕೀರ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಬಜಪೆ ಪೆÇಲೀಸರು ಯಾಕೂಬ್ ಮತ್ತು ಆತನ ಕುಟುಂಬಸ್ಥರು, ಶಕೀರ್ ವಿರುದ್ಧ ಲಾಕ್ ಡೌನ್ ನಿಯಮ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾಕೂಬ್ ತನ್ನ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಿದ್ದು ಮಾತ್ರವಲ್ಲದೇ ಇತರೆ ಸಾರ್ವಜನಿಕರ ಪ್ರಾಣಕ್ಕೂ ಕುತ್ತು ತಂದಿದ್ದಾನೆ ಎಂದು ಪೆÇಲೀಸರು ಸ್ವಯಂ ಪ್ರೇರಿತ ದೂರಿನಲ್ಲಿ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಬಜ್ಪೆ ಪೆÇಲೀಸರು ನಡೆಸುತ್ತಿದ್ದಾರೆ.


