ಕಾಸರಗೋಡು: ಕೇರಳದಲ್ಲಿ ಸೋಮವಾರ 13 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದರಲ್ಲಿ 9 ಮಂದಿ ಕಾಸರಗೋಡು ನಿವಾಸಿಗಳು. ಮಲಪ್ಪುರದಲ್ಲಿ ಇಬ್ಬರಿಗೆ, ಕೊಲ್ಲಂ ಮತ್ತು ಪತ್ತನಂತಿಟ್ಟದಲ್ಲಿ ತಲಾ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಕೊರೊನಾ ವೈರಸ್ ಸೋಂಕು ದೃಢಗೊಂಡವರಲ್ಲಿ ಆರು ಮಂದಿ ವಿದೇಶದಿಂದ ಬಂದವರು. ಮೂವರು ಕೊರೊನಾ ವೈರಸ್ ಸೋಂಕು ಬಾಧಿತರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ. ಮಲಪ್ಪುರಂ ಮತ್ತು ಕೊಲ್ಲಂನ ಒಟ್ಟು ಮೂವರು ನಿಜಾಮುದ್ದಿನ್ ಸಮಾವೇಶದಲ್ಲಿ ಭಾಗವಹಿಸಿದವರು. ಪತ್ತನಂತಿಟ್ಟದ ರೋಗಿ ವಿದೇಶದಿಂದ ಬಂದವರು. ಈ ವರೆಗೆ ರಾಜ್ಯದಲ್ಲಿ ಒಟ್ಟು 327 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಇದೀಗ ಆಸ್ಪತ್ರೆಗಳಲ್ಲಿ ಒಟ್ಟು 266 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 59 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ.
1,52804 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 122 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 152009 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಸೋಮವಾರ ರಾಜ್ಯದಲ್ಲಿ ಒಟ್ಟು 122 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ತನಕ 10716 ಮಂದಿಯ ಸ್ಯಾಂಪಲ್‍ಗಳನ್ನು ಪರಿಶೀಲಿಸಲು ಕಳುಹಿಸಲಾಗಿದ್ದು, 9607 ಮಂದಿಗೆ ನೆಗೆಟಿವ್ ಫಲಿತಾಂಶ ಬಂದಿದೆ. ಸೋಮವಾರ ಮೂವರು ರೋಗ ಮುಕ್ತರಾಗಿದ್ದಾರೆ. ಕೊಲ್ಲಂ, ತೃಶ್ಶೂರು, ಕಣ್ಣೂರು ಜಿಲ್ಲೆಯ ತಲಾ ಒಬ್ಬರು ಸೋಮವಾರ ಗುಣಮುಖರಾಗಿದ್ದಾರೆ. ಇದೇ ವೇಳೆ ವಿದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕೇರಳದ 18 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಮೆಡಿಕಲ್ ಕಾಲೇಜು ಆರಂಭಿಸಲಾಗಿದೆ. ನಾಲ್ಕು ದಿನಗಳೊಳಗೆ ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಪ್ರಥಮ ಹಂತದಲ್ಲಿ 200 ಹಾಸಿಗೆಗಳು, 10 ಐಸಿಯು ಕೊಠಡಿ ವ್ಯವಸ್ಥೆಗೊಳಿಸಲಾಗಿದೆ. ಇನ್ನೂ 100 ಹಾಸಿಗೆ ಹಾಗು 10 ಐಸಿಯು ವ್ಯವಸ್ಥೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 10844 ಮಂದಿ ನಿಗಾದಲ್ಲಿ :
ಕಾಸರಗೋಡು ಜಿಲ್ಲೆಯಲ್ಲಿ 1769 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಸೋಮವಾರ 102 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. ಈ ವರೆಗೆ 1084 ಮಂದಿಯ ಫಲಿತಾಂಶ ಲಭಿಸಿದೆ. 143 ಮಂದಿಯ ಫಲಿತಾಂಶ ಪಾಸಿಟಿವ್ ಆಗಿದೆ. 941 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 685 ಮಂದಿಯ ಫಲಿತಾಂಶ ಲಭಿಸಿಬೇಕಿದೆ.
ಸೋಮವಾರ ಜಿಲ್ಲೆಯಲ್ಲಿ 10844 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10623 ಮಂದಿ ಮನೆಗಳಲ್ಲಿ, 221 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ನೂತನವಾಗಿ 16 ಮಂದಿ ಐಸೊಲೇಷನ್ ವಾರ್ಡ್‍ಗೆ ವರ್ಗಾಯಿಸಲಾಗಿದೆ. 27 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲಾ ಕೊರೊನಾ ನಿಯಂತ್ರಣ ಘಟಕಕ್ಕೆ 58 ದೂರವಾಣಿ ಕರೆಗಳು ಆಗಮಿಸಿದ್ದು, ಉತ್ತರ ನೀಡಲಾಗಿದೆ.
ಲಾಕ್ ಡೌನ್ ಆದೇಶ ಉಲ್ಲಂಘನೆ : 64 ಕೇಸು ದಾಖಲು
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 64 ಕೇಸುಗಳನ್ನು ದಾಖಲಿಸಲಾಗಿದೆ. 100 ಮಂದಿಯನ್ನು ಬಂ„ಸಲಾಗಿದ್ದು, 37 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 6, ಕುಂಬಳೆ 4, ಬದಿಯಡ್ಕ 9, ಕಾಸರಗೋಡು 3, ಆದೂರು 4, ಹೊಸದುರ್ಗ 4, ಚಂದೇರ 6, ರಾಜಪುರಂ 1, ನೀಲೇಶ್ವರ 3, ಅಂಬಲತ್ತರ 2, ಬೇಕಲ 7, ಮೇಲ್ಪರಂಬ 3 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 357 ಕೇಸುಗಳನ್ನು ದಾಖಲಿಸಲಾಗಿದೆ. 517 ಮಂದಿಯನ್ನು ಬಂ„ಸಲಾಗಿದ್ದು, 232 ವಾಹನಗಳನ್ನು ವಶಪಡಿಸಲಾಗಿದೆ.
ಜಿಲ್ಲೆಗಳ ಕೌನ್ಸಲರ್‍ಗಳನ್ನು ಕರೆ ಮಾಡಿ ದೂರು ಸಲ್ಲಿಸಬಹುದು:
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಮಹಿಳಾ ಆಯೋಗ ಕಚೇರಿ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ನಡೆಸಲಾಗದೇ ಇರುವ ಹಿನ್ನೆಲೆಯಲ್ಲಿ ಸಮಸ್ಯೆ ಅನುಭವಿಸುತ್ತಿರುವ ಮಹಿಳೆಯರು ಕೌನ್ಸಿಲರ್‍ರನ್ನು ನೇರವಾಗಿ ಕರೆಮಾಡಿ ದೂರು ಸಲ್ಲಿಸುವ ನಿಟ್ಟಿನಲ್ಲಿ ಸೌಲಭ್ಯ ಒದಗಿಸಲಾಗಿದೆ ಎಂದು ಆಯೋಗ ಅಧ್ಯಕ್ಷೆ ಎಂ.ಸಿ. ಜೋಸೆಫೈನ್ ಅವರು ತಿಳಿಸಿದರು. ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಆಯಾ ಜಿಲ್ಲೆಗಳ ಕೌನ್ಸಿಲರ್‍ರಿಗೆ ಕರೆಮಾಡಬಹುದು. ಕ್ರಮಕೈಗೊಳ್ಳಬೇಕಾದ ಕೇಸುಗಳಲ್ಲಿ ಆಯೋಗದ ಸದಸ್ಯರು ನೇರವಾಗಿ ಕ್ರಮ ನಡೆಸುವರು. ದೂರವಾಣಿ ಸಂಖ್ಯೆಗಳು : ಎರ್ನಾಕುಲಂ- 9495081142, 9746119911. ತ್ರಿಶೂರು-9526114878, 9539401554. ಪಾಲಕ್ಕಾಡ್-7907971699. ಇಡುಕ್ಕಿ-9645733967, 7025148689, ತಿರುವನಂತಪುರಂ-9495124586, 9447865209, ಕೊಲ್ಲಂ-9995718666, 9495162057, ಆಲಪ್ಪುಳ-9446455657, ಕಲ್ಲಿಕೋಟೆ - 9947394710, ವಯನಾಡ್-9745643015, 946436359.
ಚಿಕಿತ್ಸೆ ಲಭಿಸದೆ ಸತ್ತವರ ಸಂಖ್ಯೆ 10 ಕ್ಕೆ :
ಸರಿಯಾಗಿ ಚಿಕಿತ್ಸೆ ಲಭಿಸದೆ ವೃದ್ಧರೋರ್ವರು ಸಾವಿಗೀಡಾಗುವುದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಚಿಕಿತ್ಸೆ ಲಭಿಸದೆ ಸಾವಿಗೀಡಾದವರ ಸಂಖ್ಯೆ 10ಕ್ಕೇರಿತು.
ಪಾಣತ್ತೂರ ಕಲ್ಲಪಳ್ಳಿಯ ಕೃಷ್ಣ ಗೌಡ(71) ಅವರು ಸಾವಿಗೀಡಾದರು. ಕರ್ನಾಟಕದ ಗಡಿಗಳು ಮುಚ್ಚಿರುವುದರಿಂದ ಚಿಕಿತ್ಸೆ ಲಭಿಸದೆ ಸಾವು ಸಂಭವಿಸಿದೆ. ರವಿವಾರ ಕುಂಜತ್ತೂರು ತೂಮಿನಾಡಿನ ಯೂಸುಫ್, ಹೊಸಂಗಡಿ ಅಂಗಡಿಪದವಿನ ರುದ್ರಪ್ಪ ಸಾವಿಗೀಡಾಗಿದ್ದರು. ಕೋವಿಡ್ 19 ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲಾ ಗಡಿಗಳನ್ನು ಮುಚ್ಚಲಾಗಿದೆ. ಆ್ಯಂಬುಲೆನ್ಸ್‍ಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ತೆರಳಲು ಬಿಡುತ್ತಿಲ್ಲ.
ಯು.ಎ.ಇ.ಯಲ್ಲಿ ಸಾವು : ಕಣ್ಣೂರು ಕೊಳಯಾಡ್ ನಿವಾಸಿ ಹಾರಿಸ್(36) ಕೊರೊನಾ ವೈರಸ್ ಸೋಂಕಿನಿಂದ ಸೋಮವಾರ ಬೆಳಗ್ಗೆ ಸಾವಿಗೀಡಾಗಿರುವುದಾಗಿ ಮನೆಯವರಿಗೆ ಮಾಹಿತಿ ಬಂದಿದೆ. ಅಜ್ಮಾನ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ರಕ್ಷಿಸಲಾಗಲಿಲ್ಲ. ಕಳೆದ 16 ವರ್ಷಗಳಿಂದ ಯುಎಇಯ ಹಾರಿಸ್ ತಲಾಲ್ ಗ್ರೂಪ್ ಸಂಸ್ಥೆಯ ಅಜ್ಮಾನ್ ವಲಯ ಪಿ.ಆರ್.ಒ. ಹಾಗು ಏರಿಯಾ ಮೆನೇಜರ್ ಆಗಿ ದುಡಿಯುತ್ತಿದ್ದರು.


