ಕಾಸರಗೋಡು: ಕೋವಿಡ್ 19 ಸೋಂಕು ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಿಸಿರುವ ವಿಶೇಷ ಕ್ರಿಯಾ ಯೋಜನೆ (ಆಕ್ಷನ್ ಪ್ಲಾನ್) ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದು ವಿಶೇಷ ಅಧಿಕಾರಿ, ರಾಜ್ಯ ಉದ್ದಿಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಲ್ ಕೇಷ್ ಕುಮಾರ್ ಶರ್ಮ ತಿಳಿಸಿದರು.
ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ಅವರೊಂದಿಗೆ ವೀಡಿಯೋ ಕಾನ್ ಫೆರೆನ್ಸ್ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕೊರೋನಾ ಹರಡುವಿಕೆಯ ಸಾಧ್ಯತೆಗಳನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆಗೊಳಿಸಲು ಕ್ರಮಗಳನ್ನು ಬಿಗಿಗೊಳಿಸಲಾಗುವುದು. ಈಗಾಗಲೇ ಡಬ್ಬಲ್ ಲಾಕ್ ಡೌನ್ ಆದೇಶ ಜಾರಿಗೊಳಿಸಿರುವ ಗ್ರಾಮಪಂಚಾಯತ್ ಗಳಲ್ಲದೇ ಕೋವಿಡ್ ಬಾಧಿತರ ಪತ್ತೆಯಾದ ಜಿಲ್ಲೆಯ ಇತರ ಪ್ರದೇಶಗಳಲ್ಲೂ ಪೆÇಲೀಸರು ಬಿಗಿ ಕ್ರಮಜಾರಿಗೊಳಿಸುವರು. ರೋಗಿಗಳ ಸಂಪರ್ಕ ಪಟ್ಟಿಯಲ್ಲಿರುವವರ ಸ್ಯಾಂಪಲ್ ಸಂಗ್ರಹ ಮತ್ತು ತಪಾಸಣೆ ಇನ್ನಷ್ಟು ತ್ವರಿತಗೊಳಿಸುವಂತೆ ಅವರು ಆದೇಶ ನೀಡಿದರು. ಹಚ್ಚುವರಿ ಸ್ಯಾಂಪಲ್ ಸಂಗ್ರಹ ಕೇಂದ್ರಗಳನ್ನು ತೆರೆಯಲು ಜಿಲ್ಲಾ ವೈದ್ಯಧಿಕಾರಿ ಕ್ರಮ ಕೈಗೊಳ್ಳುವರು. ಈ ನಿಟ್ಟಿನಲ್ಲಿ ಮುಂದಿನ 2 ವಾರಗಳು ನಿರ್ಣಾಯಕವಾಗಲಿವೆ ಎಂದವರು ಹೇಳಿದರು.
ಸಭೆಯಲ್ಲಿ ಐ.ಜಿ.ವಿಜಯ್ ಸಖಾರೆ, ಉತ್ತರ ವಲಯ ಐ.ಜಿ. ಅಶೋಕ್ ಯಾದವ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ರಜಿ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ.,ಜಿಲ್ಲಾ ಸಪ್ಲೈ ಅಧಿಕಾರಿ ಶಶಿಕುಮಾರ್ ಉಪಸ್ಥಿತರಿದ್ದರು.

