ಪೆರ್ಲ: ಯುದ್ಧ ಕಾಲ ತಳಹದಿಯಲ್ಲಿ ಚಟುವಟಿಕೆ ಆರಂಭಿಸಿರುವ ಉಕ್ಕಿನಡ್ಕದ ಕಾಸರಗೋಡು ಜಿಲ್ಲಾ ಸರಕಾರಿ ಮೆಡಿಕಲ್ ಕಾಲೇಜಿನ ಕೋವಿಡ್ 19 ಚಿಕಿತ್ಸಾ ಕೇಂದ್ರಕ್ಕೆ ಭಾನುವಾರ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಭೇಟಿ ನೀಡಿ ಅವಲೋಕನ ನಡೆಸಿದರು. 15 ರಿಂದ 50 ವರ್ಷ ಪ್ರಾಯದ ಕೋವಿಡ್ 19 ಸೋಂಕು ಖಚಿತಗೊಂಡವರ ಚಿಕಿತ್ಸೆ ಇಲ್ಲಿ ನಡೆಸಲಾಗುವುದು.
ಮೆಡಿಕಲ್ ಕಾಲೇಜಿಗಾಗಿ 9.6 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ತಕ್ಷಣ ಖರೀದಿಸಲಾಗುವುದು. ಕೆ.ಎಸ್.ಇ.ಬಿ. ಸಾಮಾಜಿಕ ಬದ್ಧತೆ ನಿಧಿಯಿಂದ ಈ ಮೊಬಲಗು ಮಂಜೂರು ಮಾಡಲಾಗಿದೆ. ಈ ಮೂಲಕ ಮೆಡಿಕಲ್ ಕಾಲೇಜಿನ ಚಟುವಟಿಕೆ ಪೂರ್ಣವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.


