ಮಂಜೇಶ್ವರ: ಕರ್ನಾಟಕದಿಂದ ಕೇರಳಕ್ಕೆ ಪ್ರವೇಶಿಸುವ ದ್ವಾರವಾಗಿರುವ ಮಂಜೇಶ್ವರದಲ್ಲಿ ವಾಹನಗಳನ್ನು ರೋಗಾಣು ಮುಕ್ತವಾಗಿಸುವ ಕೇಂದ್ರ (ವೆಹಿಕಲ್ ಡಿಸಿನ್ ಫೆಕ್ಷನ್ ಟನಲ್) ಇಂದು(ಏ.23) ಚಟುವಟಿಕೆ ಆರಂಭಿಸಲಿದೆ.
ಮಂಜೇಶ್ವರ ಆರ್.ಟಿ.ಒ.ಚೆಕ್ ಪೆÇೀಸ್ಟ್ ಬಳಿ ಸ್ಯಾನಿಟರೈಸೇಷನ್ ಟನಲ್ ಸ್ಥಾಪಿಸಲಾಗಿದ್ದು, 23ರಂದು ಸಂಜೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಪಯ್ಯನ್ನೂರು ರಾಟರಿ ಕ್ಲಬ್ ಸಹಕಾರದೊಂದಿಗೆ ಮೋಟಾರು ವಾಹನ ಇಲಾಖೆ ಈ ಟನಲ್ ಚಟುವಟಿಕೆಗೆ ನೇತೃತ್ವ ವಹಿಸಲಿದೆ. ಪಯ್ಯನ್ನೂರು ರಾಟಿ ಕ್ಲಬ್ ಎರಡೂವರೆ ಲಕ್ಷ ರೂ. ಬೆಲೆಯಿರುವ ಸ್ಯಾನಿಟರೈಸೇಷನ್ ಟನಲ್ ನಿರ್ಮಿಸಿದೆ. ಕೋವಿಡ್ ಹೆಚ್ಚುತ್ತಿರುವ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ರಾಜ್ಯಗಳಿಂದ ದಿನನಿತ್ಯ 500 ಕ್ಕೂ ಅಧಿಕ ಸರಕು ವಾಹನಗಳು ಕರ್ನಾಟಕ ಗಡಿದಾಟಿ ಮಂಜೇಶ್ವರ ಮೂಲಕ ಕೇರಳಕ್ಕೆ ಆಗಮಿಸುತ್ತಿವೆ. ಈ ವೇಳೆ ಈ ಟನಲ್ ಮೂಲಕ ಹಾದುಹೋಗುವ ವಾಹನಗಳು ರೋಗಾಣು ಮುಕ್ತವಾಗಲಿವೆ. ಮೋಟಾರು ವೆಹಿಕಲ್ ಇನ್ಸ್ ಪೆಕ್ಟರ್ ಕೆ.ಆರ್.ಪ್ರಸಾದ್, ರಾಟರಿ ಕ್ಲಬ್ ಅಧ್ಯಕ್ಷ ನರೇಂದ್ರ ಶೆಣೈ ಅವರ ನೇತೃತ್ವದಲ್ಲಿ ಟನಲ್ ಚಟುವಟಿಕೆ ನಡೆಸಲಿದೆ.

