ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ಪರಿಸರದ ಜನವಸತಿ ಪ್ರದೇಶದ ಸನಿಹ ಕಾಡು ಪ್ರದೇಶಕ್ಕೆ ಬುಧವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಆಕಸ್ಮಿಕ ಉಂಟಾಗಿ ಎಕ್ರೆಗಟ್ಟಲೆ ಕಾಡು ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಬೇನಾಮಿ ವ್ಯಕ್ತಿಗಳ ಅಧೀನದಲ್ಲಿರುವ ಕಾಡು-ಪೊದೆಗಳ ಬಯಲಿಗೆ ಬೆಂಕಿ ತಗಲಿ ಕ್ಷಣಾರ್ಧದಲ್ಲಿ ವ್ಯಾಪಿಸತೊಡಗಿ ಜನವಸತಿ ಪ್ರದೇಶದತ್ತ ಧಾವಿಸುವುದನ್ನು ಗಮನಿಸಿ ಸ್ಥಳೀಯರು ನಿಯಂತ್ರಣಕ್ಕೆ ಮುಂದಾದರು. ವಿಷಯ ತಿಳಿದು ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ನಿಯಂತ್ರಣ ಕ್ರಮ ಕೈಗೊಂಡರು. ಬೆಂಕಿಗೆ 20 ಎಕ್ರೆಗಿಂತಲೂ ಹೆಚ್ಚಿನ ಭೂಪ್ರದೇಶದ ಗಿಡ-ಮರಗಳು ಅಗ್ನಿಗಾಹುತಿಯಾಗಿದೆ.
ಅಗ್ನಿ ಶಾಮಕದಳದ ಮೆಕ್ಯಾನಿಕ್ ಮಣಿಕಂಠನ್, ಫಯರ್ ಅಧಿಕಾರಿ ಕೃಷ್ಣಕುಮಾರ್, ಹೋಂ ಗಾರ್ಡ್ ನಾರಾಯಣನ್, ಚಾಲಕ ರೋಯ್ ಮ್ಯಾಥ್ಯು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.


