ಮಂಜೇಶ್ವರ: ಮಹಾಮಾರಿ ಕೊರೊನಾದ ಆಪತ್ತನ್ನು ಸಮರ್ಥವಾಗಿ ಎದುರಿಸಲು ಕೇರಳ ಮುಖ್ಯಮಂತ್ರಿಯವರ ಮುಖೇನ ಸಂಗ್ರಹಿಸುತ್ತಿರುವ ದುರಂತ ನಿವಾರಣಾ ನಿಧಿಗೆ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಪ್ರಥಮ ಕಂತು ನೆರವು ಎಂಬ ನೆಲೆಯಲ್ಲಿ 10 ಲಕ್ಷ ರೂಪಾಯಿಯನ್ನು ನೀಡಿತು.
ಈ ಸಂಬಂಧ ಚೆಕ್ಕನ್ನು ತಾಲೂಕು ಸಹಕಾರಿ ಇಲಾಖೆಯ ಸಹಕಾರಿ ರಿಜಿಸ್ಟ್ರಾರ್ ರಾಜಗೋಪಾಲ ಅವರಿಗೆ ಬ್ಯಾಂಕ್‍ನ ಅಧ್ಯಕ್ಷ ಬಿ.ವಿ.ರಾಜನ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್‍ನ ಕಾರ್ಯದರ್ಶಿ ರಾಜನ್ ಪಿ.ನಾಯರ್, ಹಿರಿಯ ಅಕೌಂಟೆಂಟ್ ಕೃಷ್ಣಪ್ಪ ಕಣ್ವತೀರ್ಥ, ಶಾಖಾ ಪ್ರಬಂಧಕ ಶಿವ ಪ್ರಸಾದ್ ಬಲ್ಲಾಳ್, ಸಿಬಂದಿಗಳಾದ ಪ್ರದೀಶ್ ಬಡಾಜೆ, ಗೀತಾ, ಶ್ರೀಧರ ಆರ್.ಕೆ, ಪುರುಷೋತ್ತಮ ಪದವು, ಸುಧಾಕರ ಪಕಳ, ಸಿದ್ದಿಕ್, ವೇದಾವತಿ ಮೊದಲಾದವರು ಉಪಸ್ಥಿತರಿದ್ದರು.


