ಬದಿಯಡ್ಕ: ಮುಗು ವಾಟರ್ ಶೆಡ್ ಸಮಿತಿ ನೀರ್ಚಾಲು(ಜಲಾನಯನ ಯೋಜನಾ ಸಮಿತಿ) ಇದರ ವತಿಯಿಂದ ಕೊರೊನಾ ತುರ್ತು ಹಿನ್ನೆಲೆಯಲ್ಲಿ ತೀವ್ರ ಬಿಸಿಲಿಗೆ ಕಾರ್ಯನಿರ್ವಹಿಸುವ ಪೋಲೀಸರಿಗಾಗಿ ಉಚಿತ ಸನ್ ಗ್ಲಾಸ್(ಕೂಲಿಂಗ್ ಕನ್ನಡ)ಗಳ ವಿತರಣೆ ಬುಧವಾರ ಬದಿಯಡ್ಕ ಪೋಲೀಸ್ ಠಾಣೆಯಲ್ಲಿ ನಡೆಯಿತು.
ಹಲವಾರು ಚಟುವಟಿಕೆಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಮುಗು ವಾಟರ್ ಶೆಡ್ ನೀರ್ಚಾಲು ಘಟಕವು ನಬಾರ್ಡ್ ನ ಸಹಕಾರದೊಂದಿಗೆ ನೀಲೇಶ್ವರದ ಸಿಆರ್‍ಡಿ ಸಹಯೋಗದಲ್ಲಿ ಘಟಕದ ಅಧ್ಯಕ್ಷ ಜಯದೇವ ಖಂಡಿಗೆ ಅವರು ಬದಿಯಡ್ಕ ಪೋಲೀಸ್ ಠಾಣಾಧಿಕಾರಿ ಅನಿಲ್ ಕುಮಾರ್ ಅವರಿಗೆ ಮೊದಲ ಕನ್ನಡಕ ಹಸ್ತಾಂತರಿಸಿ ಚಾಲನೆ ನೀಡಿದರು. ಘಟಕದ ಕಾರ್ಯದರ್ಶಿ ಶಿವಪ್ರಸಾದ್, ಸದಸ್ಯ ಗಣೇಶ್ ಕೃಷ್ಣ ಅಳಕ್ಕೆ ಉಪಸ್ಥಿತರಿದ್ದರು.


