HEALTH TIPS

"ಪೋಷಣ್ ವಾಣಿ" ವಾಟ್ಸ್ ಆಪ್ ಚಾನೆಲ್ ಪ್ರಸಾರ ಆರಂಭ


         ಕಾಸರಗೋಡು:  ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ವಿಭಿನ್ನ ಕಾರ್ಯಗಳನ್ನು ನಡೆಸುತ್ತಿದೆ. ಇದರ ಅಂಗವಾಗಿ ಮನೆಯಲ್ಲಿರುವ ಶಿಶುಗಳಿಗೆ, ಹಾಲುಣಿಸುವ ತಾಯಂದಿರಿಗೆ, ಗರ್ಭಿಣಿಯರಿಗೆ, ಯುವತಿಯರಿಗಾಗಿ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಪ್ರತಿದಿನ ವಾಟ್ಸ್ ಆಪ್ ವಾಹಿನಿ (ಚಾನೆಲ್) ಪ್ರಸಾರ ಆರಂಭಿಸಿದೆ. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಪ್ರಸಾರ ಇರುವುದು. "ಪೋಷಣ್ ವಾಣಿ" ಎಂಬ ಹೆಸರಿನ ಈ ಚಾನೆಲ್ ನಲ್ಲಿ ಪ್ರತಿದಿನ ಒಂದೊಂದು ವಿಷಯದಲ್ಲಿ ಮಾಹಿತಿ ನೀಡಲಾಗುವುದು. ಮಹಿಳೆಯರ ಮತ್ತು ಮಕ್ಕಳಹಕ್ಕುಗಳು, ಕಾನೂನು, ಸಂರಕ್ಷಣೆ ಸೌಲಭ್ಯಗಳು, ಆರೋಗ್ಯ, ಪೆÇೀಷಣೆ ಸಹಿತ ವಿಭಿನ್ನ ವಿಷಯಗಳಲ್ಲಿ ಭಾಷಣ, ಸಂವಾದ, ಕಿರು ನಾಟಕ, ಹಾಡುಗಳು ಇತ್ಯಾದಿಗಳು ಪ್ರಸಾರಗೊಳ್ಳಲಿವೆ.
      ಮಹಿಳಾ, ಶಿಶು ಕಲ್ಯಾಣ ಇಲಾಖೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ಡಿಸೆಂಬರ್ ತಿಂಗಳಲ್ಲಿ ಉದ್ಘಾಟಿಸಿದ್ದ "ಪೋಷಣ್ ವಾಣಿ"ಯನ್ನು ಕೋವಿಡ್ ಅವಧಿಯಲ್ಲಿ ಜನಜಾಗೃತಿ ಮಾಧ್ಯಮವಾಗಿ ಚಟುವಟಿಕೆ ನಡೆಸಲಿದೆ. ವಿವಿಧ ಜಿಲ್ಲೆಗಳಿಂದ  ಪೋಷಕಾಹಾರ ರೆಸಿಪಿಗಳು, ಮಕ್ಕಳ ಮತ್ತು ಅಂಗನವಾಡಿ ನೌಕರರ ಕರಕುಶಲ ವಸ್ತುಗಳು, ಪ್ರತಿಭಾ ಪ್ರದರ್ಶನ, ಮಕ್ಕಳ ಮತ್ತು ಮಹಿಳೆಯರ ಸಂಬಂಧ ಬ್ರೋಷರ್ ಗಳು, ಸುದ್ದಿಗಳು ಇತ್ಯಾದಿಗಳನ್ನು ಆಯ್ದು ಪ್ರಸಾರಗೊಳಿಸಲಾಗುವುದು.
        2ರಿಂದ 4 ನಿಮಿಷ ಅವಧಿಯ ಸಂದೇಶಗಳನ್ನು ಪ್ರತಿದಿನ ಈ ಚಾನೆಲ್ ಪ್ರಸಾರ ನಡೆಸಲಿದೆ. ಕೇರಳದ ಅಂಗನವಾಡಿ ವ್ಯವಸ್ಥೆಗಳ ಮೂಲಕ ಇಲಾಖೆಯ ಸೇವೆಗಳನ್ನು, ಸೂಚನೆಗಳನ್ನು ಸಾರ್ವಜನಿಕರಿಗೆ ತಲಪಿಸುವುದು ಇಲ್ಲಿನ ಉದ್ದೇಶ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಆಯ ದಿನದ ಸಂದೇಶ ಕಾರ್ಯಕ್ರಮ ಅಧಿಕಾರಿಗಳಿಗೆ ಸಲ್ಲಿಸಲಾಗುವುದು. ಅವರು ಸಿ.ಡಿ.ಪಿ.ಒ.ಗಳಿಗೆ, ಸಿ.ಡಿ.ಪಿ.ಒ.ಗಳು ಮೇಲ್ವಿಚಾರಕರಿಗೆ, ಮೇಲ್ವಿಚಾರಕರು ಅಂಗನವಾಡಿ ನೌಕರರಿಗೆ ಪ್ರತಿದಿನ ಸಂದೇಶ ಹಸ್ತಾಂತರಿಸುವರು. ಅಂಗನವಾಡಿ ನೌಕರರ ಗುಂಪುಗಳ ಮೂಲಕ ಈ ಸಂದೇಶ ಸಾರ್ವಜನಿಕರಿಗೆ ತಲಪಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries