HEALTH TIPS

ಕೊರೊನಾ ಕಾಲ ಎಂತಹದೆಲ್ಲ ಪಾಠ ಕಲಿಸುತ್ತದೋ-ಇಲ್ಲೊಬ್ಬರು ಇರುವೆ ಚಟ್ನಿ ತಯಾರಿಸುತ್ತಾರೆ!

            ಮುಳ್ಳೇರಿಯ: ವಿಶ್ವ ಮಾರಕ ಕೊರೋನಾದಿಂದ ತತ್ತರಿಸಿದೆ. ಕೊರೋನಾ ತಡೆಯ ನಿಟ್ಟಿನಲ್ಲಿ ಹೇರಲಾದ ಲಾಕ್ ಡೌನ್ ಜನಜೀವನವನ್ನು ತೀವ್ರ ರೀತಿಯಲ್ಲಿ ಬಾಧಿಸುತ್ತಿದೆ. ಎಲ್ಲ ವಲಯಗಳೂ ಸ್ಥಬ್ದವಾಗಿ ಜನರು ಆಹಾರಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಮನೆಯಲ್ಲೇ ಕುಳಿತು ಗಂಜಿ ಬೇಯಿಸಿ ಕುಡಿಯೋಣ ಎಂದರೆ ಪದಾರ್ಥಕ್ಕೆ ಏನು ಎಂಬ ಚಿಂತೆ ಕಾಡುತ್ತಿದೆ.  ಖರ್ಚಿಲ್ಲದೆ ಸ್ವಾದಿಷ್ಟವಾದ ಚಟ್ನಿಯನ್ನು ಚಪ್ಪರಿಸಿ ಗಂಜಿ ಕುಡಿಯುವ ವಿಧಾನವನ್ನು ಕಾಸರಗೋಡು ಜಿಲ್ಲೆಯ ಈ ಕಲಾವಿದ ಹೇಳಿಕೊಡುತ್ತಿದ್ದಾರೆ. ಅಯ್ಯೋ...... ಛೀ....... ಥೂ.... ಅನ್ನಬೇಡಿ, ಸ್ವಲ್ಪ ಕೇಳಿ...
     "ನಿಮ್ಮ ಮನೆ ಹಿತ್ತಿಲಿನ ಮರ, ಗಿಡಗಳಲ್ಲಿ ಕೆಂಬಣ್ಣದ ಇರುವೆಗಳು ಗೂಡು ಕಟ್ಟಿವೆಯೇ? ಹಾಗಿದ್ದಲ್ಲಿ ಅದು ಇನ್ನು ಅಗತ್ಯಕ್ಕೆ ಬರುವುದು. ರುಚಿಕರವಾಗಿ ಗಂಜಿ ಕುಡಿಯಲು ಇನ್ನು ಒಣಮೀನು, ಮಾಂಸ ಅಗತ್ಯವಿಲ್ಲ. ಈ ಇರುವೆಯನ್ನು ಗೂಡು ಸಮೇತ ತೆಗೆದು ಚಟ್ನಿ ಪುಡಿ ಮಾಡಿದಲ್ಲಿ ಅಷ್ಟೂ ಸ್ವಾದ" ಎನ್ನುತ್ತಾರೆ ಪರಪ್ಪ ನಿವಾಸಿ ಶ್ರೀಲೇಶ್. ಕೇಳುವಾಗ ಅಷ್ಟೊಂದು ಹಿತವಾಗದಿದ್ದರೂ ಗಾಂಧಾರಿ ಮೆಣಸು, ಉಪ್ಪು ಬೆರೆಸಿ ಇರುವೆಯನ್ನು ಹುರಿದು ಪುಡಿಮಾಡಿದ ಮಿಶ್ರಣದೊಂದಿಗೆ ಬೆರೆಸಿ ಚಟ್ನಿಯನ್ನು ಸೇವಿಸಿ ನೋಡಿ.... ವಾಹ್... ಎನ್ನುತ್ತಾರೆ 28 ರ ತರುಣ ಶ್ರೀಲೇಶ್.
       10 ರಷ್ಟು ನೆಲದೀಪಗಳನ್ನು ಒಂದರ ಮೇಲೊಂದರಂತೆ ಅಟ್ಟಿಯಿರಿಸಿ "ದೀಪ ನೃತ್ಯ" ಎಂಬ ಅದ್ಭುತ ಕಲೆಯನ್ನು ಪ್ರದರ್ಶಿಸಿ ಈಗಾಗಲೇ ರಾಷ್ಟ್ರೀಯ ಗಮನ ಸೆಳೆದಿರುವ ಈತ ಈ ನೃತ್ಯದಲ್ಲಿ ವಿಶ್ವ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ನೂರಾರು ವೇದಿಕೆಗಳಲ್ಲಿ, ಟಿವಿ ಚ್ಯಾನೆಲ್ ಗಳಲ್ಲಿ ಕಲಾ ಪ್ರದರ್ಶನ ನೀಡಿರುತ್ತಾರೆ. ತನ್ನ ಪೂರ್ವಿಕರಿಂದ ಇರುವೆ ಗೂಡಿನ ಔಷಧೀಯ ಗುಣಗಳ ಬಗ್ಗೆ ತಿಳುವಳಿಕೆ ಪಡೆದಿರುವ ಬಗ್ಗೆ ಮಾಹಿತಿ ನೀಡುವ ಇವರು ಕುತೂಹಲಕ್ಕಾಗಿ  ಇರುವೆ ಚಟ್ನಿಯನ್ನು ಪರೀಕ್ಷಿಸಿದಾಗ ಅತ್ಯಂತ ರುಚಿಕರ ಎನಿಸಿತು. ಮುಂದೆ ಮನೆ ಮಂದಿಯೂ ಇದನ್ನು ನೆಚ್ಚತೊಡಗಿದರು. ಸದ್ಯ ಇರುವೆ ಚಟ್ನಿ ತಮ್ಮ ಆಹಾರದ ಭಾಗವೇ ಆಗಿದೆ ಎಂದು ತಿಳಿಸುತ್ತಾರೆ. ಮರದಲ್ಲಿರುವ ಇರುವೆ ಸಮೇತ ಗೂಡುಗಳನ್ನು ತಂದು ಗೆರಸೆಯೊಂದರಲ್ಲಿ ಹಾಕಿ ಕಸ ಬೇರ್ಪಡಿಸಿದ ಬಳಿಕ ಮಣ್ಣಿನ ಮಡಕೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಬಳಿಕ ಉಪ್ಪು, ಮೆಣಸು ಬೆರೆಸಿ ಮಿಕ್ಸಿಯಲ್ಲಿ ಹುಡಿ ಮಾಡಬೇಕು. ಶುಂಠಿ, ಒಗ್ಗರಣೆ ಸೊಪ್ಪು ಹಾಕಿದಲ್ಲಿ ಮತ್ತಷ್ಟು ಸ್ವಾದಿಷ್ಟ ಎಂದು ಶ್ರೀಲೇಶ್ ನಮ್ಮನ್ನು ಅಚ್ಚರಿಗೊಳಿಸುತ್ತಾರೆ. ಅಂತೂ ಲಾಕ್ ಡೌನ್ ಅವಧಿ ಮುಕ್ತಾಯಗೊಳ್ಳುತ್ತಿರುವಂತೆ ಇಂತಹ ಎಂತೆತದೋ ಸಂಶೋಧನೆ, ಹೊಸ ರುಚಿಗಳು ಬರಲಿದೆಯೋ ಏನೋ!

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries