ಕಾಸರಗೋಡು: ಶುಕ್ರವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಖಚಿತಗೊಂಡವರು. ಎರಿಯಾಲ್ ನಿವಾಸಿಗಳಾದ 36,26 ವರ್ಷದ ಪುರುಷರು, 8 ವರ್ಷದ ಬಾಲಕ, ಮೊಗ್ರಾಲ್ ಪುತ್ತೂರು ನಿವಾಸಿಯಾದ 33 ವರ್ಷದ ಮಹಿಳೆ, ಮದೂರು ನಿವಾಸಿಯಾದ 29 ವರ್ಷದ ಪುರುಷ, ಕುಂಬಳೆಯ 35 ವರ್ಷದ ಪುರುಷ, ಮುಳಿಯಾರು ನಿವಾಸಿ 16 ವರ್ಷದ ಬಾಲಕ ಸೋಂಕು ಬಾಧಿತರು. ಇವರಲ್ಲಿ 4 ಮಂದಿ ದುಬಾಯಿಯಿಂದ ಆಗಮಿಸಿದವರು. ಉಳಿದವರು ರೋಗ ಬಾಧಿತರಿಂದ ಸೋಂಕು ತಗುಲಿಸಿಕೊಂಡವರು.
ಈತನ್ಮಧ್ಯೆ ದುಬಾಯಿಯಿಂದ ಗಮಿಸಿದ್ದ ತಳಂಗರೆ ನಿವಾಸಿ 54 ವರ್ಷದ, ಉದುಮಾ ನಿವಾಸಿ 31 ವರ್ಷದ, ಕಸರಗೋಡು ತುರ್ತಿ ನಿವಾಸಿ 27 ವರ್ಷದ ವ್ಯಕ್ತಿಗಳ ಸ್ಯಾಂಪಲ್ ತಪಾಸಣೆಯಲ್ಲಿ ಎರಡು ಬಾರಿಯ ಫಲಿತಾಂಶ ನೆಗೆಟಿವ್ ಆಗಿದೆ. ಇವರನ್ನು ಮೆಡಿಕಲ್ ಬೋರ್ಡ್ ನ ಆದೇಶ ಪ್ರಕಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಗುರುವಾರದ ಗಣನೆ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 128 ಮಂದಿ ಸೋಂಕು ಖಚಿತಗೊಂಡವರು.


