ಮಂಜೇಶ್ವರ: ಕೋವಿಡ್ ಲಾಕ್ ಡೌನ್ ಮಧ್ಯೆಯೂ ನಿಷೇಧಿತ ತಂಬಾಕು ಉತ್ಪನ್ನಗಳು ಕರ್ನಾಟಕದಿಂದ ಕೇರಳಕ್ಕೆ ಯಾವುದೇ ಅಡೆತಡೆ ಇಲ್ಲದೆ ಹರಿದು ಬರುತ್ತಿದೆ .
ಅಬಕಾರಿ ಪೆÇಲೀಸರು ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಸಿದ ವಾಹನ ತಪಾಸಣೆಯ ವೇಳೆ ಮಂಗಳೂರು ಭಾಗದಿಂದ ಕಾಂಞಗಾಡ್ ಭಾಗಕ್ಕೆ ತೆರಳುತ್ತಿದ್ದ ಹಸಿರು ತರಕಾರಿಯ ವಾಹನದಲ್ಲಿ ಸಾಗಿಸಲಾಗುತಿದ್ದ ಕೆ ಎಲ್ 14 ಆರ್ 857 ವಾಹನದಲ್ಲಿ ಹತ್ತು ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆ ಹಚ್ಚಿರುವರು.
ಈ ಸಂಬಂಧ ಕುಂಜತ್ತೂರು ನಿವಾಸಿ ಶ್ಯಾಮ್ ಸುಂದರ್ (45), ತಲಪಾಡಿ ನಿವಾಸಿ ಅಬೂಬಕ್ಕರ್ (40) ಎಂಬವರನ್ನು ಸೆರೆ ಹಿಡಿಯಲಾಗಿದೆ. ದಂಡ ವಿಧಿಸಿದ ಬಳಿಕ ವಾಹನವನ್ನು ಬಿಟ್ಟುಕೊಡಲಾಗಿದೆ.


