ಕುಂಬಳೆ: ಬೆಕ್ಕುಗಳ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯ ಕೋವಿಡ್ ವಾರ್ಡುಗಳ ಪರಿಸರದಲ್ಲಿ ಇಲಿಗಳೂ ಸತ್ತುಬಿದ್ದಿರುವ ರೀತಿಯಲ್ಲಿ ಪತ್ತೆ ಹಚ್ಚಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆಯ ನಿಗಾ ಘಟಕದ ಕೊಠಡಿಯ ಸಮೀಪದಲ್ಲೇ ಇಲಿಯನ್ನು ಸತ್ತ ರೀತಿಯಲ್ಲಿ ಪತ್ತೆ ಹಚ್ಚಲಾಗಿದೆ. ಮೃಗ ಸಂರಕ್ಷಣಾ ಇಲಾಖೆಯ ಪ್ರಯೋಗಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಲಿಯ ಉದರದಿಂದ ಆರು ಮರಿಗಳನ್ನು ಹೊರ ತೆಗೆಯಲಾಗಿದೆ. ಹೊಟ್ಟೆಯ ಭಾಗಕ್ಕೆ ಗಾಯಗೊಂಡ ರೀತಿಯಲ್ಲಿ ಇಲಿಗಳು ಪತ್ತೆಯಾಗಿವೆ.
ಕೆಲವು ದಿನಗಳ ಹಿಂದೆ ಕೋವಿಡ್ ವಾರ್ಡ್‍ನ ಪಕ್ಕದಲ್ಲಿ ಬೆಕ್ಕುಗಳು ಸತ್ತ ರೀತಿಯಲ್ಲಿ ಪತ್ತೆಯಾಗಿರುವುದು ಹಲವು ರೀತಿಯ ವದಂತಿಗಳಿಗೆ ಕಾರಣವಾಗಿತ್ತು. ಇಲಿಗಳ ಸಾಂಪಲ್ ತೆಗೆದು ಪ್ರಯೋಗಾಲಯದಲ್ಲಿ ಇಡಲಾಗಿದೆ. ಕೋವಿಡ್ ವಾರ್ಡುಗಳ ಪರಿಸರದಲ್ಲೇ ಇಲಿ ಹಾಗೂ ಬೆಕ್ಕುಗಳು ಸಾವನ್ನಪ್ಪಿರುವುದು ಹಲವು ಶಂಕೆಗಳಿಗೂ ಕಾರಣವಾಗಿದೆ.
ಅಮೇರಿಕಾದ ಮೃಗಾಲಯವೊಂದರಲ್ಲಿ ಹುಲಿಯೊಂದಕ್ಕೆ ಕೋವಿಡ್ ವೈರಸ್ ತಗಲಿರುವುದು ದೃಢಪಟ್ಟಿರುವಂತೆ ಕಾಸರಗೋಡು ಜನರಲ್ ಆಸ್ಪತ್ರೆಯ ಕೋವಿಡ್ ಚಿಕಿತ್ಸೆಯಲ್ಲಿರುವ ರೋಗಿಗಳ ವಾರ್ಡ್ ಪರಿಸರದಲ್ಲೇ ಬೆಕ್ಕು ಹಾಗೂ ಇಲಿಗಳೂ ಸತ್ತಿರುವುದು ಪ್ರಾಣಿಗಳಿಗೂ ವೈರಸ್ ತಗಲುವ ಸಾಧ್ಯತೆ ಇದೆಯೇ ಎಂಬ ಸಂಶಯಕ್ಕೆ ಕಾರಣವಾಗುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.


