ಜೆನೆವಾ (ಸ್ವಿಡ್ಜಲ್ಯಾರ್ಂಡ್): ಕೋವಿಡ್-19 ಸೋಂಕು ಈ ಭೂಮಿ ಮೇಲೆ ಕೆಲ ಕಾಲದವರಗೆ ಇರಬಹುದು, ಬಹುತೇಕ ರಾಷ್ಟ್ರಗಳು ಸೋಂಕನ್ನು ನಿಭಾಯಿಸುವ ಮತ್ತು ತಡೆಗಟ್ಟುವ ಮೊದಲ ಹೆಜ್ಜೆಯಲ್ಲಿ ಇನ್ನೂ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದ್ಹನೊಮ್ ಗೆಬ್ರೆಯೆಸಸ್, ಕೊರೋನಾ ವೈರಸ್ ನಿಯಂತ್ರಣದಲ್ಲಿದೆ ಎಂದು ಕೆಲ ದೇಶಗಳು ಭಾವಿಸುತ್ತಿವೆ, ಆದರೆ ಅಲ್ಲಿ ಮತ್ತೆ ಸೋಂಕು ಕಂಡುಬರುತ್ತಿದೆ, ಆಫ್ರಿಕಾ ಮತ್ತು ಅಮೆರಿಕಾ ದೇಶಗಳಲ್ಲಿ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶಗಳು ಈ ಬಗ್ಗೆ ಜಾಗ್ರತೆ ವಹಿಸಿ ಸನ್ನದ್ಧವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ರಂದೇ ಇದನ್ನು ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಘೋಷಿಸಿತ್ತು. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ ಎಂದಿದ್ದಾರೆ.
ಪಶ್ಚಿಮ ಯುರೋಪ್ ರಾಷ್ಟ್ರಗಳಲ್ಲಿ ಸೋಂಕು ಸ್ಥಿರವಾಗಿದ್ದು ಇಳಿಮುಖವಾಗುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆಯಿದ್ದರೂ ಕೂಡ ಆಫ್ರಿಕಾ, ಮಧ್ಯ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಮತ್ತು ಪೂರ್ವ ಯುರೋಪ್ ಗಳಲ್ಲಿ ಇಳಿಮುಖವಾಗುತ್ತಿದೆ ಎಂದು ಹೇಳಿದ್ದಾರೆ.


