ಕಾಸರಗೋಡು: ಕೊರೋನಾ ಬಾಧೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಕಾರಣ ನೌಕರಿ ಕಳೆದುಕೊಂಡಿರುವ ನೋಂದಣಿ ಹೊಂದಿರುವ ಶೇಂದಿ ಸಂಗ್ರಹ ಕಾರ್ಮಿಕರಿಗೆ ಮತ್ತು ಶೇಂದಿ ಅಂಗಡಿ ನೌಕರರರಿಗೆ ಕಲ್ಯಾಣ ನಿಧಿ ಮಂಡಳಿಯಿಂದ ತಲಾ 5 ಸಾವಿರ ಮಂದಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಎಂ.ಸುರೇಂದ್ರನ್ ತಿಳಿಸಿದರು. ರಾಜ್ಯದ ಎಲ್ಲ ಶೇಂದಿ ಅಂಗಡಿಗಳನ್ನು ಮುಚ್ಚುಗಡೆ ನಡೆಸುವವರೆಗೆ ನೌಕರಿ ನಡೆಸಿದ ಮತ್ತು ಕಲ್ಯಾಣನಿಧಿ ಮಮಡಳಿಗೆ ಕಂತು ಪಾವತಿಸಿದ್ದ ಕಾರ್ಮಿಕರಿಗೆ ಈ ಆರ್ಥಿಕ ಸಹಾಯ ಲಭಿಸಲಿದೆ. ಅರ್ಹರಾದ ಕಾರ್ಮಿಕರಿಗೆ ಏ.30ರ ಮುಂಚಿತವಾಗಿ ನಿಗದಿತ ಮಾದರಿಯ ಅರ್ಜಿ ಸಂಬಂಧಪಟ್ಟ ಎಲ್ಲ ಜಿಲ್ಲಾ ವೆಲ್ ಫೇರ್ ಫಂಡ್ ಇನ್ಸ್ ಪೆಕ್ಟರ್ ರಿಗೆ ಈ-ಮೇಲ್ ಮುಖಾಂತರ ಸಲ್ಲಿಸಬೇಕು: ಅರ್ಜಿ ಮಾದರಿ ಮತ್ತು ಮಾಹಿತಿಗೆ ವೆಬ್ ಸೈಟ್ ಸಂದರ್ಶಿಸಬಹುದು.
ಶೇಂದಿ ಕಾರ್ಮಿಕರಿಗೆ ಆರ್ಥಿಕ ಸಹಾಯ
0
ಏಪ್ರಿಲ್ 15, 2020