ಬದಿಯಡ್ಕ: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗುವ ಜನತೆಗೆ ಸರ್ಕಾರ, ಸಂಘ ಸಂಸ್ಥೆ ಸಹಾಯ ಹಸ್ತ ಚಾಚುತ್ತಿರುವುದು ನಾವು ದಿನ ನಿತ್ಯ ವಾರ್ತಾ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಅಂತಹ ವಾರ್ತೆಗಳನ್ನು ಸಿದ್ಧಪಡಿಸಿ ಪ್ರಚುರಪಡಿಸುವ ಪ್ರಾದೇಶಿಕ ಪತ್ರಕರ್ತರ ಬದುಕು ಬವಣೆಗಳ ಸಂಕಷ್ಟವನ್ನು ಅರಿತವರು ಯಾರು ಇಲ್ಲದಂತಾಗಿದೆ. ತಿಂಗಳು ಗಟ್ಟಲೆಯ ಈ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರೂ ಸಂದಿಗ್ದಾವಸ್ಥೆಯಲ್ಲಿ ಸಿಲುಕಿದ್ದಾರೆ.
ಲಾಕ್ ಡೌನ್ ನಿಂದಾಗಿ ಮನೆಯೊಳಗೆ ಕುಳಿತ ಬದಿಯಡ್ಕದ ಪ್ರಾದೇಶಿಕ ಪತ್ರಕರ್ತರ ಸಂಕಷ್ಟಕ್ಕೆ ಸಕಾಲದಲ್ಲಿ ಸ್ಪಂದಿಸಲು ಉಪ್ಪಳ ಸಮೀಪದ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಹಾಗೂ ಉದ್ಯೋಗಿಗಳು ಮುಂದೆ ಬಂದಿರುವುದು ಕಾಸರಗೋಡು ಜಿಲ್ಲೆಗೆ ಮಾದರಿಯಾಗಿದೆ.
ಪೈವಳಿಕೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಭಾಗ್,ಕಾರ್ಯದರ್ಶಿ ಕೇಶವ ಬಾಯಿಕಟ್ಟೆ,ಸಿಬ್ಬಂದಿಗಳಾದ ನಿತಿನ್ ಪೈವಳಿಕೆ,ನವೀನ್ ಪೈವಳಿಕೆ,ಸುಗಂಧಿ,ಬಾಲಕೃಷ್ಣ ಶೆಟ್ಟಿ,ರಂಜಿತ್ ಪೂಜಾರಿ ,ಸುಖೇಶ್ ಕುಮಾರ್ ಕಳಾಯಿ, ಮನೋಹರ್ ಆಚಾರ್ಯ, ಪ್ರಸಾದ್ ಆಚಾರ್ಯ ಕಯ್ಯಾರ್,ದೀಪಾ ಬಿ.ಕೆ.ಅವರ ಸಹಕಾರದಲ್ಲಿ ಬದಿಯಡ್ಕ ವಲಯದ ಪ್ರಾದೇಶಿಕ ಪತ್ರಕರ್ತರಿಗೆ ಶುಕ್ರವಾರ ನಿತ್ಯೋಪಯೋಗಿ ವಸ್ತುಗಳ ಕಿಟ್ ವಿತರಿಸಿದರು.
ಹಿರಿಯ ಪತ್ರಕರ್ತರಾದ ಆಶೋಕ್ ನೀರ್ಚಾಲು ಅವರಿಗೆ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಭಾಗ್ ಪ್ರಥಮ ಕಿಟ್ ನೀಡಿ ವಿತರಣೆಗೆ ಚಾಲನೆ ನೀಡಿದರು.
ಪತ್ರಕರ್ತರಾದ ಗಂಗಾಧರ ಪಳ್ಳತ್ತಡ್ಕ,ಪುರುಷೋತ್ತಮ ಪೆರ್ಲ,ಹಸನ್ ಬದಿಯಡ್ಕ,ಸುಬೈರ್ ಬಾಪಲಿಪೆÇೀನಂ, ಗಂಗಾಧರ ತೆಕ್ಕೆಮೂಲೆ, ರವಿ ನಾಯ್ಕಾಪು, ಜಯ ಮಣಿಯಂಪಾರೆ, ಬಾಲಕೃಷ್ಣ ಅಚ್ಚಾಯಿ, ಪತ್ರಿಕಾ ವಿತರಕ ಬಾಲಕೃಷ್ಣ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಆಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು.
ಜನ ಸಾಮಾನ್ಯರ ನೋವು ನಲಿವಿಗೆ,ಸಮಸ್ಯೆಗೆ ಸ್ಪಂದಿಸುವ ಪತ್ರಕರ್ತರ ಬದುಕಿನ ಸಂಕಷ್ಟಕ್ಕೆ ಸ್ಪಂದಿಸಿದ ಈ ಸೇವಾ ಕಾರ್ಯ ಆದರ್ಶಯುತವಾಗಿದೆ ಎಂದು ಬದಿಯಡ್ಕ ಪತ್ರಕರ್ತರ ಸಂಘಟನೆಯು ಬ್ಯಾಂಕ್ ಅಧಿಕೃತರನ್ನು ಅಭಿನಂದಿಸಿದೆ.



