ತಿರುವನಂತಪುರ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ವಿನಾಯಿತಿ ಹಸಿರು ಮತ್ತು ಕಿತ್ತಳೆ-ಬಿ ವಲಯದಲ್ಲಿ ಏಪ್ರಿಲ್ 20ರಿಂದ ಜಾರಿಗೆ ಬರಲಿರುವುದಾಗಿ ಕೇರಳ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ ಬೆಹ್ರಾ ತಿಳಿಸಿದ್ದಾರೆ.
ಕೋಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಯನ್ನು ಹಸಿರು ವಲಯ, ಆಲಪ್ಪುಳ, ತಿರುವನಂತಪುರ, ಪಾಲಕ್ಕಾಡ್, ವಯನಾಡ್ ಮತ್ತು ತೃಶ್ಯೂರ್ ಜಿಲ್ಲೆಗಳನ್ನು ಕಿತ್ತಳೆ-ಬಿ ವಲಯದಲ್ಲಿ ಗುರುತಿಸಲಾಗಿದೆ. ಈ ಎರಡೂ ವಲಯಗಳಲ್ಲಿರುವವರು ಜಿಲ್ಲೆಯನ್ನು ದಾಟಿ ಸಂಚರಿಸಲು ಅನುಮತಿ ನಿರಾಕರಿಸಲಾಗಿದೆ. ಈ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯ ಮಾರ್ಗನಿರ್ದೇಶದನ್ವಯ ಮಾತ್ರ ಸಂಚಾರಕ್ಕೆ ಅನುಮತಿ ಕಲ್ಪಿಸಲಾಗಿದೆ. ಮದ್ಯ ಮಾರಾಟ, ಸಾರ್ವಜನಿಕ ಸಭೆ, ಶಿಕ್ಷಣ ಇಲಾಖೆ, ಚಿತ್ರಮಂದಿರ, ಶಾಪಿಂಗ್ ಕಾಂಪ್ಲೆಕ್ಸ್ ಕಾರ್ಯಾಚರಿಸದು. ಜನರು ಗುಂಪುಗೂಡುವುದಕ್ಕೂ ನಿಯಂತ್ರಣ ಹೇರಲಾಗಿದೆ. ಕೇರಳದಲ್ಲಿ ಕೋವಿಡ್-19 ವೈರಸ್ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‍ಡೌನ್ ಕಡಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ.

