ಕಾಸರಗೋಡು: ಮುಂಬಯಿಯ ಸಾವಿತ್ರಿ ವಾಣಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕಾಂಞಂಗಾಡಿನ ಜಿಲ್ಲಾ ಆಸ್ಪತ್ರೆಗೆ ಏಳೂವರೆ ಲಕ್ಷ ರೂ. ಮೌಲ್ಯದ ಪಿ.ಪಿ.ಇ. ಕಿಟ್‍ಗಳನ್ನು ದೇಣಿಗೆಯಾಗಿ ನೀಡಲಾಯಿತು.
1400 ಕಿಟ್‍ಗಳನ್ನು ಈ ಮೂಲಕ ವಿತರಣೆ ನಡೆಸಲಾಗಿದೆ. ಕೋವಿಡ್ ರೋಗಿಗಳ ಶುಶ್ರೂಷೆಗೆ ಅಗತ್ಯವಿರುವ ಈ ಕಿಟ್‍ಗಳ ಕೊರತೆ ಆಸ್ಪತ್ರೆಯಲ್ಲಿ ತಲೆದೋರಿದ ಅವ„ಯಲ್ಲಿ ಈ ಕೊಡುಗೆ ಸಂತಸ ತಂದಿದೆ ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅವರು ಜಿಲ್ಲಾ ವೈದ್ಯಾ„ಕಾರಿಗಳಿಗೆ ಕಿಟ್ ಗಳನ್ನು ಹಸ್ತಾಂತರಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎನ್.ಉಣ್ಣಿಕೃಷ್ಣನ್, ಕೋವಿಡ್ ನಿಗಾ ಘಟಕ ಅ„ಕಾರಿ ಡಾ.ಎ.ಟಿ.ಮನೋಜ್, ಜಿಲ್ಲಾ ಕಾರ್ಯಕ್ರಮ ಅ„ಕಾರಿ ಡಾ.ರಾಮನ್ ಸ್ವಾತಿ ವಾಮನ್, ಜಿಲ್ಲಾ ಆಸ್ಪತ್ರೆ ವರಿಷ್ಠಾ„ಕಾರಿ ಡಾ.ಕೆ.ವಿ.ಪ್ರಕಾಶ್, ಆರ್.ಎಂ.ಒ. ಡಾ.ರಿಜಿತ್ ಕೃಷ್ಣನ್, ಫಾರ್ಮಸಿಸ್ಟ್ ಎಂ.ಇ.ದಿನೇಶನ್, ಸಾವಿತ್ರಿ ವಾಣಿ ಫೌಂಡೇಶನ್ ಪ್ರಬಂಧಕ ಪ್ರವೀಣ್ ಕುಮಾರ್ ಶೆಣೈ, ಚಿನ್ಮಯಾ ಮಿಷನ್ ಕಾರ್ಯದರ್ಶಿ ಬಿ.ಮುಕುಂದ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

