HEALTH TIPS

ಹಾಟ್ ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ನಿಬಂಧನೆ ಅನ್ವಯ ವಿನಾಯಿತಿ-ಗೊಂದಲ ಬೇಡ-ಸರಿಯಾದ ಮಾಹಿತಿ ಇದು


      ಕಾಸರಗೋಡು: ಹಾಟ್ ಸ್ಪಾಟ್ ಗಳಲ್ಲದೇ ಇರುವ ಗ್ರಾಮಪಂಚಾಯತ್ ಮತ್ತು ನಗರಸಭೆಗಳಲ್ಲಿ ಲಾಕ್ ಡೌನ್ ಕಟ್ಟುನಿಟ್ಟು ಆದೇಶದಲ್ಲಿ ನಿಬಂಧನೆಗಳ ಅನ್ವಯ ಕೊಂಚ ವಿಯಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
    ಸೋಮವಾರ : ಕೊನೆಯ ನಂಬ್ರಗಳು ವಿಷಮ ಸಂಖ್ಯೆ ಆಗಿರಬಹುದಾದ ವಾಹನಗಳು ಸಂಚಾರ ನಡೆಸಬಹುದು.
ಮೊಬೈಲ್ ಅಂಗಡಿ, ಕಂಪ್ಯೂಟರ್ ಮಾರಾಟ-ಸೇವೆ ಕೇಂದ್ರ, ಬೀಡಿ ಕಂಪನಿಗಳು, ಫ್ರಿಜ್-ವಾಷಿಂಗ್ ಮೆಷಿನ್-ಎ.ಸಿ.-ಫ್ಯಾನ್ ಮಾರಾಟ ಸಂಸ್ಥೆಗಳು ಸೋಮವಾರ ಚಟುವ;ಟಿಕೆ ನಡೆಸಬಹುದು.
       ಮಂಗಳವಾರ : ಕೊನೆಯ ನಂಬ್ರಗಳು ಸಮ ಸಂಖ್ಯೆ ಆಗಿರುವ  ವಾಹನಗಳು ಸಂಚಾರ ನಡೆಸಬಹುದು. ಬೀಡಿ ಕಂಪನಿಗಳು, ಪುಸ್ತಕ ಮಾರಾಟ ಕೇಂದ್ರಗಳು ಇತ್ಯಾದಿ ಚಟುವಟಿಕೆ ನಡೆಸಬಹುದು.
         ಬುಧವಾರ : ಕೊನೆಯ ನಂಬ್ರ ಗಳು ವಿಷಮ ಸಂಖ್ಯೆ ಆಗಿರುವ ವಾಹನಗಳು ಸಂಚಾರ ನಡೆಸಬಹುದು. ಚಿಪ್ಪಿನಿಂದ ಕುಮ್ಮಾಯ ನಿರ್ಮಿಸುವ ಸಂಸ್ಥೆಗಳು, ಅಡಕೆ ಸಂಗ್ರಹ ನಡೆಸುವ ಬದಿಯಡ್ಕ, ಪೆರ್ಲ, ನೀರ್ಚಾಲು, ಮುಳ್ಳೇರಿಯ, ಬಂದಡ್ಕ, ಬಾಯಾರು ಕ್ಯಾಂಪೆÇಕೂ ಔಟ್ ಲೆಟ್ ಗಳು ಚಟುವಟಿಕೆ ನಡೆಸಬಹುದು. ಚಪ್ಪರ, ಧ್ವನಿ ಮತ್ತು ಬೆಳಕು ಸಂಸ್ಥೆಗಳನ್ನು ತೆರೆದು ಶುಚೀಕರಿಸಬಹುದು.
         ಗುರುವಾರ :ಕೊನೆಯ ನಂಬ್ರಗಳು ಸಮ ಸಂಖ್ಯೆ ಆಗಿರುವ ವಾಹನಗಳು ಸಂಚರಿಸಬಹುದು. ವರ್ಕ್ ಶಾಪ್, ವಾಹನಗಳ ಬಿಡಿಭಾಗಗಳ ಅಂಗಡಿಗಳು ಇತ್ಯಾದಿ ಚಟುವಟಿಕೆ ನಡೆಸಬಹುದು. ಹರಿತ ಕ್ರಿಯಾ ಸೇನೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ನಡೆಸಬಹುದು.
        ಶುಕ್ರವಾರ :ಕೊನೆಯ ನಂಬ್ರಗಳು ವಿಷಮ ಸಂಖ್ಯೆ ಆಗಿರುವ ವಾಹನಗಳು ಸಂಚಾರ ನಡೆಸಬಹುದು. ಪುಸ್ತಕ ಅಂಗಡಿಗಳು ಚಟುವಟಿಕೆ ನಡೆಸಬಹುದು.
        ಶನಿವಾರ : ಕೊನೆಯ ನಂಬ್ರಗಳು ಸಮ ಸಂಖ್ಯೆ ಆಗಿರುವ ವಾಹನಗಳು ಸಂಚರಿಸಬಹುದು. ಘನ ವಾಹನಗಳು ಸಂಚರಿಸಬಹುದು. ಕಟ್ಟಡ ಸಾಮಾಗ್ರಿಗಳ ಮಾರಾಟ ಕೇಂದ್ರಗಳು ಚಟುವಟಿಕೆ ನಡೆಸಬಹುದು. ಟೆಕ್ಸ್ ಟೈಲ್ಸ್ ಅಂಗಡಿಗಳು ಶಟರ್ ಮುಚ್ಚಿ ಒಳಗಡೆ ಶುಚೀಕರಣ ನಡೆಸಬಹುದು.
         ಭಾನುವಾರ :ಗೂಡ್ಸ್ ಕೆರಿಯರ್ ವಾಹನಗಳು ಸಂಚರಿಸಬಹುದು. ಮೊಬೈಲ್ ಅಂಗಡಿಗಳು, ಕಂಪ್ಯೂಟರ್ ಮಾರಾಟ-ಸೇವೆ ಸಂಸ್ಥೆಗಳು, ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮಾರಾಟ ಕೇಂದ್ರಗಳು, ವರ್ಕ್ ಶಾಪ್, ವಾಹನಗಳ ಬಿಡಿ ಭಾಗಗಳ ಮಾರಾಟ ಕೇಂದ್ರ ಚಟುವಟಿಕೆ ನಡೆಸಬಹುದು. ಈ ವಿನಾಯಿತಿ ಇರುವ ಅಂಗಡಿಗಳ ಮಾಲೀಕರು ಗುರುತುಚೀಟಿ, ನಿಖರತೆಯ ಪ್ರತಿಜ್ಞಾ ಸೂಚಿ ಹೊಂದಿರಬೇಕು. ಚಪ್ಪಲಿ ಅಂಗಡಿಗಳನ್ನು ಶುಚೀಕರಿಸಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries