HEALTH TIPS

ಹೋಮಿಯೋಪತಿ ಇಲಾಖೆಯಿಂದ ಟೆಲಿಮೆಡಿಸಿನ್ ಆ್ಯಂಡ್ ಕೌನ್ಸಿಲಿಂಗ್ ಆರಂಭ


           
          ಕಾಸರಗೋಡು: ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಹೋಮಿಯೋಪತಿ ಇಲಾಖೆ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಯೋಜನೆಗಳು, ಕ್ಲಿನಿಕ್‍ಗಳು ಜನ ಬಳಸದೇ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೋಮಿಯೋಪತಿ ಇಲಾಖೆ ಟೆಲಿಮೆಡಿಸಿನ್ ಆ್ಯಂಡ್ ಕೌನ್ಸಿಲಿಂಗ್ ಘಟಕ ಆರಂಭಿಸಲಾಗಿದೆ. ಜಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ, ನಿರಂತರ ತಪಾಸಣೆಗಾಗಿ ಚಿಕಿತ್ಸಾ ಕೇಂದ್ರಗಳಿಗೆ ತಲಪಲು ಸಾಧ್ಯವಿಲ್ಲದೇ ಇರುವ ರೋಗಿಗಳಿಗೆ, ಲಾಕ್ ಡೌನ್ ಅವಧಿಯಲ್ಲಿ ಹಲವು ರೀತಿಯ ಮಾನಸಿಕ ಒತ್ತಡ ಅನುಭವಿಸುತ್ತಿರುವವರಿಗೆ ದೂರವಾಣಿ ಮೂಲಕ ಸಲಹೆ-ಸೂಚನೆಗಳು ಲಭಿಸಲಿವೆ. ಸಾರ್ವಜನಿಕರು ಮತ್ತು ನಿಗಾದಲ್ಲಿರುವವರು ತಮ್ಮ ಸಂಶಯ ನಿವಾರಣೆಗಾಗಿ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ದೂರವಾಣಿ ಮೂಲಕ ವೈದ್ಯರನ್ನು ಮತ್ತು ಮನಶಾಸ್ತ್ರಜ್ಞರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಹೋಮಿಯೋ) ತಿಳಿಸಿದರು.
       ನಿಗಾದಲ್ಲಿರುವ ಮಹಿಳೆಯರಿಗೆ ದೂರವಾಣಿ ಸಂಖ್ಯೆ: 9400061902, 9400061903. ಕೌನ್ಸಿಲಿಂಗ್ ಬಯಸುವವರಿಗೆ: 940006194, 9645730338, ನಿಗಾದಲ್ಲಿರುವ ಮಕ್ಕಳ ಸಮಸ್ಯೆಗೆ : 9400061905, 9400061906, ಜೀವನ ಶೈಲಿ ರೋಗಿಗಳಿಗೆ ಮತ್ತು ವಯೋವೃದ್ಧರ ಸಮಸ್ಯೆಗಳಿಗೆ: 9400061907, 9400061908, 9400061911.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries