ಮ್ಯೂನಿಚ್: ಜರ್ಮನಿಯಲ್ಲಿ ಕೊರೊನಾ ವೈರಸ್ ಮೊದಲ ಪ್ರಕರಣವನ್ನು ಭೇದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ಹಾಗಾದರೆ ಮೊದಲ ಪ್ರಕರಣ ಯಾವುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ. ಕೊರೊನಾ ವೈರಸ್ ಗೆ ಮೊದಲ ತುತ್ತಾಗಿದ್ದು ಜರ್ಮನಿಯ ಕಾರ್ ಪಾಸ್ರ್ಟ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಾಂಗೈ ಮೂಲದ ಮಹಿಳೆಗೆ.
ಹಾಗಾದರೆ ಆ ಮಹಿಳೆಗೆ ಕೊರೊನಾ ಎಲ್ಲಿಂದ ಬಂತು ಆ ಮಹಿಳೆ ಏನಾದರೂ ಚೀನಾಗೆ ಹೋಗಿದ್ದರಾ, ಅಥವಾ ಆಕೆಯ ಸ್ನೇಹಿತರ್ಯಾರಾದರೂ ಚೀನಕ್ಕೆ ಹೋಗಿದ್ದರಾ, ಸಂಪರ್ಕದಲ್ಲಿದ್ದರಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಇಡೀ ಜರ್ಮನಿಗೆ ಕೊರೊನಾ ವೈರಸ್ ಹರಡುವಿಕೆಗೆ ಕಾರಣವಾಗಿದ್ದು ಆ ಮಹಿಳೆ.
ಇಟಲಿಗಿಂತ ಮೊದಲು ಜರ್ಮನಿಯಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿತ್ತು. ಆದರೂ ಇಟಲಿಯಲ್ಲಿ 17 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಅಂದು ಕಂಪನಿಯ ಕ್ಯಾಂಟೀನ್‍ನಲ್ಲಿ ಏನೇನಾಗಿತ್ತು?
ಜರ್ಮನಿಯ ಕಾರ್ ಪಾಟ್ರ್ಸ್ ಕಂಪನಿಯ ಕ್ಯಾಂಟೀನ್‍ನಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಒಬ್ಬರು ಬೇರೊಬ್ಬರ ಬಳಿ ಇದ್ದ ಉಪ್ಪು ಕೇಳಿದಾಗ ಉಪ್ಪಿನ ಜೊತೆ ಕೊರೊನಾ ಕೂಡ ಟ್ರಾನ್ಸ್‍ಫರ್ ಆಗಿತ್ತು.ಆದರೆ ಈ ಸಣ್ಣ ಪುಟ್ಟ ವಿಷಯಗಳೇ ಕೊರೊನಾವನ್ನು ವಿಜ್ಞಾನಿಗಳಿಗೆ ತಡೆಯಲು ಸಹಾಯ ಮಾಡಿತು. ಎನ್ನುವುದು ಕೂಡ ಸತ್ಯ.
ಮಹಿಳೆಗೆ ಕೊರೊನಾ ಪಾಸಿಟಿವ್ ಕುರಿತ ಮಾಹಿತಿ:
ಶಾಂಗೈ ಮೂಲದ ಮಹಿಳೆಯೊಬ್ಬರಿಗೆ ಕೊರೊನಾ ಬಂದಿದೆ. ಅವರ ಜೊತೆ ಯಾರು ಸಂಪರ್ಕದಲ್ಲಿದ್ದಿರಿ ಎಂದು ವೆಬಾಸ್ಟೋ ಸಿಇಓ ತಮ್ಮ ಸಿಬ್ಬಂದಿಯಲ್ಲಿ ಕೇಳಿದ್ದರು. ಅವರ ಜೊತೆ ಕೈಕುಕಿದವರು ಎಷ್ಟೋ ಮಂದಿ, ತಬ್ಬಿಕೊಂಡವರೋ ಮತ್ತೆಷ್ಟೋ.. ಎಲ್ಲರೂ ಸಾಮಾನ್ಯವಾಗಿ ಅವರ ಬಳಿ ಮಾತನಾಡಿದ್ದರು.ಮಹಿಳೆಯ ಪೆÇೀಷಕರು ವುಹಾನ್‍ನಿಂದ ಜನವರಿಯಲ್ಲಿ ಜರ್ಮನಿಗೆ ಬಂದಿದ್ದರು. ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ತಕ್ಷಣವೇ ಚೀನಾಕ್ಕೆ ತೆರಳಿದ್ದರು. ಅಲ್ಲಿ ಹೋದ ಬಳಿಕ ಅವರಿಗೆ ಕೊರೊನಾ ಇರುವುದು ತಿಳಿದುಬಂದಿತ್ತು.
ಬಳಿಕ ಆ ಮಹಿಳೆಯೊಂದಿಗೆ ಯಾರ್ಯಾರು ಸಂಪರ್ಕದಲ್ಲಿದ್ದಿರಿ ಎಂದು ಹೇಳಿದಾಗ ಒಂದೊಂದೇ ವಿಚಾರ ಹೊರಬಿದ್ದಿತ್ತು. ಓರ್ವ ನಾನು ಕ್ಯಾಂಟೀನ್‍ನಲ್ಲ ಅವರಿಗೆ ಊಟದ ಸಮಯದಲ್ಲಿ ಉಪ್ಪು ನೀಡಿದ್ದೆ ಎಂದು, ಇನ್ನೊಬ್ಬರು ಅವರ ಕೈಕುಲುಕಿದ್ದೆ ಎಂದು ಹೇಳಿದ್ದಾರೆ.
ಕಂಪನಿಯಲ್ಲಿ 4 ಸಾವಿರ ಮಂದಿ ಕೆಲಸ ಮಾಡುತ್ತಿದ್ದರು:
ಇದೇ ವಿಷಯ ಆ ಕಂಪನಿಯಲ್ಲಿ ಕೊರೊನಾ ಹರಡದಂತೆ ಸಹಾಯ ಮಾಡಿತು. ಮುನಿಕ್‍ನ ವೆಬಾಸ್ಟೋ ಗ್ರೂಪಿಗೆ ಕಾರಿನ ಬಿಡಿಭಾಗಗಳನ್ನು ಒದಗಿಸುವ ಒಂದು ಕಂಪನಿ, ಅದರಲ್ಲಿ ಸುಮಾರು 4 ಸಾವಿರ ಮಂದಿ ಕೆಲಸ ಮಾಡುತ್ತಾರೆ. ಈ ಕೆಲವು ಮಾಹಿತಿಗಳನ್ನು ಕಲೆ ಹಾಕಿದ ವಿಜ್ಞಾನಿಗಳು ಮತ್ತಷ್ಟು ಕೊರೊನಾ ಹರಡುವುದನ್ನು ತಡೆದಿದ್ದಾರೆ.ಜರ್ಮನಿಯಲ್ಲಿ ಇದುವರೆಗೆ 2100 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 17 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಸಿಇಓ ಸೇರಿಸಿ ಒಟ್ಟು ಐದು ಮಂದಿ ಅವರ ಸಂಪರ್ಕದಲ್ಲಿದ್ದರು. ಜನವರಿಯಿಂದ ಫೆಬ್ರವರಿ 11ರವರೆಗೆ ಕಂಪನಿ ಮುಚ್ಚಲಾಗಿತ್ತು.


