ತಿರುವನಂತಪುರ: ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೆ, ಉತ್ತರ ಪ್ರದೇಶ ಮತ್ತು ದೆಹಲಿ ಸರ್ಕಾರಗಳು ಕೆಲವು ಪ್ರದೇಶಗಳನ್ನು 'ಹಾಟ್ ಸ್ಪಾಟ್' ಎಂದು ಘೋಷಿಸಿವೆ.
ಲಾಕ್ ಡೌನ್ ಮತ್ತು ಹಾಟ್ ಸ್ಪಾಟ್‍ಗಳಿಗೆ ಹಲವು ವ್ಯತ್ಯಾಸಗಳಿವೆ. ಹಾಟ್ ಸ್ಪಾಟ್ ಎಂದು ಘೋಷಣೆಯಾದ ಪ್ರದೇಶದಲ್ಲಿ ಕಫ್ರ್ಯೂ ಜಾರಿಯಲ್ಲಿರುತ್ತದೆ. ಜನರು ಅಗತ್ಯ ವಸ್ತುಗಳ ಖರೀದಿಗೆ ಸಹ ಮನೆಯಿಂದ ಹೊರ ಬರುವಂತಿಲ್ಲ.
6 ಅಥವ ಅದಕ್ಕಿಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾದ ಪ್ರದೇಶವನ್ನು 'ಹಾಟ್ ಸ್ಪಾಟ್' ಎಂದು ಘೋಷಣೆ ಮಾಡಲಾಗುತ್ತದೆ. ಈ ಪ್ರದೇಶವನ್ನು ಪೆÇಲೀಸರು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ.
ಹಾಟ್ ಸ್ಪಾಟ್ ಎಂದು ಘೋಷಣೆಯಾದ ತಕ್ಷಣ ಪೆÇಲೀಸರು ಬ್ಯಾರಿಕೇಡ್ ಹಾಕಿ ಸ್ಥಳವನ್ನು ಸೀಲ್ ಮಾಡುತ್ತಾರೆ. ಈ ಪ್ರದೇಶಕ್ಕೆ ಹೊರಗಿನಿಂದ ಯಾರೂ ಬರುವಂತಿಲ್ಲ. ಈ ಪ್ರದೇಶದಲ್ಲಿರುವ ಜನರು ಹೊರಗೆ ಹೋಗುವಂತಿಲ್ಲ.
ದಿನಸಿ ಮತ್ತು ಔಷಧಿಗಳನ್ನು ತರಲು ಸಹ ಜನರು ಮನೆಯಿಂದ ಹೊರ ಬರುವಂತಿಲ್ಲ. ಸರ್ಕಾರವೇ ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತದೆ. ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಹೊರತುಪಡಿಸಿ ಉಳಿದ ಯಾವುದೇ ವಾಹನಗಳು ಹಾಟ್ ಸ್ಪಾಟ್ ಪ್ರವೇಶ ಮಾಡಬಾರದು. ಹಾಟ್ ಸ್ಪಾಟ್ ಪ್ರದೇಶ ಸಂಪೂರ್ಣ ಪೆÇಲೀಸ್ ವಶದಲ್ಲಿ ಇರುತ್ತದೆ. ಈ ಪ್ರದೇಶಕ್ಕೆ ಬರುವ, ಹೋಗುವ ದಾರಿಗಳನ್ನು ಬಂದ್ ಮಾಡಲಾಗುತ್ತದೆ. ಮಾಧ್ಯಮಗಳಿಗೂ ಸಹ ಈ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗುತ್ತದೆ.ಸ್ಥಳೀಯ ಆಡಳಿತ ಹಾಟ್ ಸ್ಪಾಟ್ ಪ್ರದೇಶದಲ್ಲಿ ನಿರಂತರ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತದೆ. ಈ ಪ್ರದೇಶಕ್ಕೆ ಪ್ರವೇಶಿಸುವ ಮೊದಲ ಅವರು ಸಹ ಅಗತ್ಯ ಸುರಕ್ಷತಾ ಕವಚಗಳನ್ನು ಧರಿಸಬೇಕು.
ಲಾಕ್ ಡೌನ್ ಜಾರಿಯಲ್ಲಿರುವ ಪ್ರದೇಶದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರ ಬರಲು ಅವಕಾಶವಿದೆ. ದಿನಸಿ, ತರಕಾರಿ, ಹಣ್ಣು, ಮೆಡಿಕಲ್ ಶಾಪ್‍ಗಳು ಬಾಗಿಲು ತೆರೆದಿರುತ್ತವೆ. ಆದರೆ, ಹಾಟ್ ಸ್ಪಾಟ್‍ಗಳಲ್ಲಿ ಯಾವುದೇ ಅಂಗಡಿ ಬಾಗಿಲು ತೆರೆಯುವಂತಿಲ್ಲ.


