ಪಾಲ್ಗಾರ್(ಮಹಾರಾಷ್ಟ್ರ): ರಾಸಾಯನಿಕ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ಇತರೆ ಮೂವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿ ನಡೆದಿದೆ.
ಖಾಸಗಿ ಸಂಸ್ಥೆಗೆ ಸೇರಿದ್ದ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಗ್ಯಾಲಕ್ಸಿ ಸಫ್ರ್ಯಾಕ್ಟಂಟ್ಸ್ (GalaxySurfactants) ಎಂಬ ಸಂಸ್ಥೆ ಸ್ಫೋಟದ ನಂತರ ಯಾವ ಬೆಂಕಿ ಅನಾಹುತವಾಗಿಲ್ಲ ಎಂದು ಹೇಳಿಕೆ ನೀಡಿದೆ. ಘಟನೆ ಸಂಭವಿಸಿದಾಗ ತಾರಾಪುರ ಎಂಐಡಿಸಿ ಪ್ರದೇಶದ ಸ್ಥಾವರದಲ್ಲಿ 67ಕ್ಕೆ ಹೆಚ್ಚು ಉದ್ಯೋಗಿಗಳು ಗೈರಾಗಿದ್ದರು ಎಂದು ನಾಗರಿಕ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಗ್ಯಾಲಕ್ಸಿ ಸಫ್ರ್ಯಾಕ್ಟಂಟ್ಸ್ ಸಣ್ಣ ಫೀಡ್ ಟ್ಯಾಂಕ್‍ನಲ್ಲಿ ಸ್ಫೋಟ ಸಂಭವಿಸಿದೆ ಮತ್ತು ಸ್ಫೋಟಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ.'ನಮ್ಮ ತಾರಾಪುರ ಎಂ -3 ಸ್ಥಾವರದಲ್ಲಿ ಇಂದು ಸಣ್ಣ ಮದ್ಯಮ ಫೀಡ್ ಟ್ಯಾಂಕ್‍ನಲ್ಲಿ ಸ್ಫೋಟ ಸಂಭವಿಸಿದೆ. ಇದು ಎರಡು ಸಾವು ಹಾಗೂ ಮೂರು ಜನರಿಗೆ ಗಾಯಗಳಾಗಲು ಕಾರಣವಾಗಿದೆ. ನಮ್ಮ ಸುರಕ್ಷತಾ ಮುನ್ನೆಚ್ಚರಿಕೆ ಹೊರತಾಗಿಯೂ ಸ್ಫೋಟ ಸಂಭವಿಸಿದ್ದು ಟದ ಮೂಲ ಕಾರಣವನ್ನು ಕಂಡುಹಿಡಿಯುವ ಪ್ರಕ್ರಿಯೆಯಲ್ಲಿದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಸ್ಥೆಯಲ್ಲಿ ಈ ಪ್ರಕಾರದ ದುರ್ಘಟನೆ ನಡೆದಿರುವುದು ಇದು ಮೊದಲು ಎನ್ನಲಾಗಿದೆ.'ಸಂತ್ರಸ್ತ ಕುಟುಂಬಗಳಿಗೆ ನಾವು ನೆರವನ್ನು ಸಂತಾಪ ಸೂಚಿಸುತ್ತಿದ್ದೇವೆ. ಯಾವುದೇ ಬೆಂಕಿ ಅನಾಹುತ ಸಂಭವಿಸಿಲ್ಲ. ಮತ್ತು ನಮ್ಮ ಎಂ -3 ಸೈಟ್‍ನಲ್ಲಿ ಸಂತ್ರಸ್ತರು ಹಾಗೂ ಎಲ್ಲ ಕಾರ್ಮಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲವನ್ನೂ ನಾವು ಮಾಡುತ್ತಿದ್ದೇವೆ 'ಎಂದು ಕಂಪನಿ ತಿಳಿಸಿದೆ.
ಮಧ್ಯಾಹ್ನದ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೋಶ ಮುಖ್ಯಸ್ಥ ವಿವೇಕಾನಂದ ಕದಮ್ ತಿಳಿಸಿದ್ದಾರೆ.


