ಕಾಸರಗೋಡು: ಕೇರಳದಲ್ಲಿ ರವಿವಾರ ಒಟ್ಟು 8 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಐವರಿಗೆ, ಪತ್ತನಂತಿಟ್ಟ, ಕಣ್ಣೂರು, ಕಾಸರಗೋಡು ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ರೋಗ ಬಾಧಿತರಲ್ಲಿ ನಾಲ್ವರು ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರು. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಬಾ„ತರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ. ಪತ್ತನಂತಿಟ್ಟ ಪಂದಳಂ ನಿವಾಸಿ 19 ರ ಹರೆಯದ ಯುವತಿಗೆ ಕೋವಿಡ್ ದೃಢೀಕರಿಸಲಾಗಿದೆ. ಈಕೆ ದೆಹಲಿಯಲ್ಲಿ ವಿದ್ಯಾರ್ಥಿನಿಯಾಗಿದ್ದಾಳೆ. ಈ ವರೆಗೆ ನಿಜಾಮುದ್ದೀನ್‍ನಿಂದ ಬಂದ 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ.
ರಾಜ್ಯದಲ್ಲಿ ಈ ವರೆಗೆ ಒಟ್ಟು 314 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಭಾನುವಾರ ಆರು ಮಂದಿ ರೋಗ ಮುಕ್ತರಾಗಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ ನಾಲ್ಕು ಮಂದಿ, ತಿರುವನಂತಪುರ(ಮಲಪ್ಪುರ ನಿವಾಸಿ), ಕಲ್ಲಿಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 256 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 56 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರು ಈ ಹಿಂದೆ ಸಾವಿಗೀಡಾಗಿದ್ದರು.
ರಾಜ್ಯದಲ್ಲಿ ಒಟ್ಟು 1,58,617 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1,57,841 ಮಂದಿ ಮನೆಗಳಲ್ಲೂ, 776 ಮಂದಿ ವಿವಿಧ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ರವಿವಾರ 188 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗ ಲಕ್ಷಣಗಳಿರುವ 10,221 ಮಂದಿಯ ಸ್ಯಾಂಪಲ್ ಲ್ಯಾಬ್‍ಗೆ ಕಳುಹಿಸಲಾಗಿದ್ದು, ಇದರಲ್ಲಿ 9300 ಮಂದಿ ಸ್ಯಾಂಪಲ್ ಫಲಿತಾಂಶ ನೆಗೆಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 7 ವರ್ಷದ ಬಾಲಕನಿಗೆ ಕೋವಿಡ್ : ಕಾಸರಗೋಡು ಜಿಲ್ಲೆಯಲ್ಲಿ 7 ವರ್ಷದ ಬಾಲಕನಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಕಾಸರಗೋಡು ನೆಲ್ಲಿಕುಂಜೆಯ ನಿವಾಸಿಯಾಗಿರುವ ಈ ಬಾಲಕನ ತಂದೆ ಮತ್ತು ತಾಯಿ ಕೊರೊನಾ ವೈರಸ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಸುಧಾರಿಸುತ್ತಿದೆ ಎಂದು ಡಿಎಂಒ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 10731 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 10499 ಮಂದಿ ಮನೆಗಳಲ್ಲೂ, 232 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ರವಿವಾರ 43 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 142 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಇವರಲ್ಲಿ ಮೂವರು ಗುಣಮುಖರಾಗಿದ್ದಾರೆ.
ಲಾಕ್ ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ : ಮೂವರ ಬಂಧನ
ಲಾಕ್ ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಆರೋಪದಲ್ಲಿ ಮೂವರನ್ನು ಪೆÇಲೀಸರು ಬಂ„ಸಿದ್ದಾರೆ. ಕೋಡೋಂ-ಬೇಳೂರು ಗ್ರಾಮ ಪಂಚಾಯತ್‍ನ ಬೇಳೂರು ಗ್ರಾಮದ ಪೆÇೀರ್ಕಳಂ ಕೃಪಾ ನಿಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಎಂ.ಸಿ.ಬಿ.ಎಸ್.ಆಶ್ರಮದ ಮುಖ್ಯಸ್ಥ ಬೆನ್ನಿ ವರ್ಗೀಸ್(50), ಫಾದರ್ ಫ್ರಾನ್ಸಿಸ್ ಆಲಿಯಾಸ್ ವಿನೋದ್ (40), ಸಹಾಯಕ ಸೆಲ್ವನ್ವಿ ಟಿ.(54) ಯನ್ನು ಅಂಬಲತ್ತರ ಪೆÇಲೀಸರು ಬಂ„ಸಿದ್ದಾರೆ. ಈ ಆಶ್ರಮದಲ್ಲಿ 7 ಮಂದಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಅರಿತು ಪೆÇಲೀಸರು ದಾಳಿ ನಡೆಸಿದ್ದರು. ನಂತರ ಇವರನ್ನು ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ. ಕೇರಳ ಸಾಂಕ್ರಾಮಿಕ ರೋಗ ನಿಯಂತ್ರಣ ಮಂಡಳಿಯ ಕ್ರಮದಂತೆ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ವಿದೇಶದಲ್ಲಿ ಇಬ್ಬರ ಸಾವು : ಅಯರ್ಲೇಂಡ್ ಮತ್ತು ಯು.ಎಸ್.ನಲ್ಲಿ ಕೇರಳದ ಇಬ್ಬರು ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದರು.
ಅಯರ್ಲೇಂಡ್‍ನಲ್ಲಿ ಕೊರೊನಾ ಬಾಧಿಸಿದ ಕೋಟ್ಟಯಂ ಕುರುಪ್ಪುಂತರ ನಿವಾಸಿ, ದಾದಿಯಾಗಿರುವ ಬೀನಾ ಜಾರ್ಜ್(54) ಅವರು ಸಾವಿಗೀಡಾದರು. ಯು.ಎಸ್.ನ ನ್ಯೂಯಾರ್ಕ್‍ನಲ್ಲಿ ಕೋವಿಡ್ ಬಾ„ಸಿದ ವಿದ್ಯಾರ್ಥಿ ತಿರುವಲ್ಲ ಕಡಪ್ಪು ವಲಿಯಪರಂಬಿಲ್ ತೈಕಡವಿಲ್ ಶೋನ್ ಅಬ್ರಹಾಂ ಸಾವಿಗೀಡಾದರು. ಇದರೊಂದಿಗೆ ನ್ಯೂಯೋರ್ಕ್‍ನಲ್ಲಿ ಸಾವಿಗೀಡಾದ ಕೇರಳೀಯರ ಸಂಖ್ಯೆ ನಾಲ್ಕಕ್ಕೇರಿದೆ.


