HEALTH TIPS

ಕೊರೊನಾ : ತಜ್ಞ ವೈದ್ಯರ ತಂಡ ಕಾಸರಗೋಡಿಗೆ

 
      ಕಾಸರಗೋಡು: ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ವ್ಯವಸ್ಥೆಗೊಳಿಸಲಾದ ಕೊರೊನಾ ಪ್ರತಿರೋಧ ಕೇಂದ್ರಕ್ಕೆ ತಿರುವನಂತಪುರದಿಂದ ಆಗಮಿಸಿದ ತಜ್ಞ ವೈದ್ಯಕೀಯ ತಂಡಕ್ಕೆ ಭವ್ಯ ಸ್ವಾಗತ ನೀಡಲಾಯಿತು.
      ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರ ನಿರ್ದೇಶನದಂತೆ ಡಾ|ಸಂತೋಷ್ ಕುಮಾರ್ ಎಸ್. ಅವರ ನೇತೃತ್ವದಲ್ಲಿ ಆಗಮಿಸಿದ ತಂಡ ಎ.6 ರಂದು ಮುಂಜಾನೆ 1 ಗಂಟೆಗೆ ಕಾಸರಗೋಡಿಗೆ ತಲುಪಿದೆ. ಈ ತಂಡಕ್ಕೆ ರಾಜ್ಯದ ಉದ್ದಗಲಕ್ಕೂ ಅಲ್ಲಲ್ಲಿ ಪೆÇಲೀಸರು, ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು ಮೊದಲಾದವರು ಸ್ವಾಗತ ನೀಡಿ, ಆಹಾರ ನೀಡಿ ಸಿಹಿ ವಿತರಿಸಿದರು.  ಈ ತಂಡದಲ್ಲಿ ಕಾಸರಗೋಡು ನಿವಾಸಿಯೂ ಆಗಿರುವ ಡಾ|ಶಮೀಂ ಮುಹಮ್ಮದ್ ಅವರೂ ಇದ್ದಾರೆ.
         ತಜ್ಞ ವೈದ್ಯರ ತಂಡ ಕಾಸರಗೋಡು ಜಿಲ್ಲೆಯ ಗಡಿಯಾದ ಕಾಲಿಕಡವಿಗೆ ತಲುಪಿದಾಗ ಪಿಲಿಕೋಡ್ ಪಂಚಾಯತ್ ಸದಸ್ಯರು ಅ„ಕಾರಿಗಳು ಸ್ವಾಗತ ನೀಡಿದರು. ಕಾಸರಗೋಡಿಗೆ ತಲುಪಿದ ತಂಡವನ್ನು ಶಾಸಕ ರಾಜಗೋಪಾಲ್ ಅವರ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries