ಕಾಸರಗೋಡು: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿರುವ ಕಾಸರಗೋಡು ಜಿಲ್ಲೆ ಸಹಿತ ದೇಶದ 62 ಜಿಲ್ಲೆಗಳಲ್ಲಿ ಇನ್ನಷ್ಟು ಬಿಗು ಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಕೇರಳದ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ತೃಶ್ಶೂರು, ಪತ್ತನಂತಿಟ್ಟ, ತಿರುವನಂತ ಪುರ ಜಿಲ್ಲೆಗಳು ಈ ಯಾದಿಯಲ್ಲಿದೆ.
ಈಗಾಗಲೇ ದೇಶದ 274 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣದ ದಾಖಲಾಗಿದೆ. ಮಾ.22 ರಿಂದ ರೋಗಿಗಳ ಸಂಖ್ಯೆಯಲ್ಲಿ ಮೂರು ಹೆಚ್ಚಳವಾಗಿದೆ. ಈ ಕಾರಣದಿಂದ ನಿಯಂತ್ರಣ ಬಿಗುಗೊಳಿಸಲು ಕೇಂದ್ರ ಸರಕಾರ ತೀರ್ಮಾನ ತೆಗೆದುಕೊಂಡಿದೆ.
ಕೋವಿಡ್ ಚಿಕಿತ್ಸಾ ವಸ್ತುಗಳನ್ನು ಇನ್ನಷ್ಟು ಹೆಚ್ಚು ಉತ್ಪಾದಿಸಲು ಕೇಂದ್ರ ಸರಕಾರ ನಿರ್ದೇಶ ನೀಡಿದೆ. 2.7 ಕೋಟಿ ಎನ್95 ಮಾಸ್ಕ್‍ಗಳು ಮುಂದಿನ ಎರಡು ತಿಂಗಳಿಗೆ ಬೇಕಾಗಿ ಬರಲಿದೆ. 16 ಲಕ್ಷ ಪರಿಕ್ಷಾ ಕಿಟ್‍ಗಳನ್ನು ಮತ್ತು 50 ಸಾವಿರ ವೆಂಟಿಲೇಟರ್‍ಗಳನ್ನು ಸಿದ್ಧಪಡಿಸಬೇಕೆಂದು ಕೇಂದ್ರ ತಿಳಿಸಿದೆ.

