ಕಾಸರಗೋಡು: ಕೊರೋನಾ ಪ್ರತಿರೋಧ ಚಟುವಟಿಕೆಗಳಲ್ಲಿ ರಾಜ್ಯದ ಗಡಿಪ್ರದೇಶಗಳಲ್ಲಿ ಚೆಕ್ ಪೆÇೀಸ್ಟ್ ಗಳ ಕಾರ್ಯ ನಿರ್ವಹಣೆ ಗಮನಾರ್ಹವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತಲಪ್ಪಾಡಿ ಅತಿದೊಡ್ಡ ಚೆಕ್ಪೋಸ್ಟ್ ಆಗಿದೆ. ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ವೇಳೆಯೂ ದಿನಂಪ್ರತಿ ನೂರಾರು ವಾಹನಗಳು ಈ ಚೆಕ್ ಪೆÇೀಸ್ಟ್ ಮೂಲಕ ಸಂಚಾರ ನಡೆಸುತ್ತಿವೆ. ಇಲ್ಲಿ ಅಹೋರಾತ್ರಿ ವಾಹನ ತಪಾಸಣೆ ತೀವ್ರವಾಗಿ ನಡೆಯುತ್ತಿದೆ. ಆರೋಗ್ಯ-ಪೆÇಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಮಾ.15 ರಿಂದಲೇ ಈ ಕಾಯಕ ನಡೆಸುತ್ತಿದ್ದಾರೆ. ಈ ವರೆಗೆ 7359 ವಾಹನಗಳ ಬಿಗಿ ತಪಾಸಣೆ ನಡೆಸಲಾಗಿದೆ. ಈ ವಾಹನಗಳಲ್ಲಿ ಸಂಚಾರ ನಡೆಸಿದ್ದ 16533 ಮಂದಿಯ ಪ್ರಾಥಮಿಕ ತಪಾಸಣೆ ನಡೆಸಲಾಗಿದೆ. ರೋಗ ಲಕ್ಷಣವಿರುವ ಸಂಶಯದಲ್ಲಿ 14 ಮಂದಿಯನ್ನು ನಿಗಾ ಕ್ಕೊಳಪಡಿಸಿ, ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಇಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶೆಡ್ ನಲ್ಲಿ ಈ ಎಲ್ಲ ಚಟುವಟಿಕೆಗಳು ನಡೆದುಬರುತ್ತಿವೆ.
ಗಂಭೀರ ಸ್ಥಿತಿಯ ರೋಗಿಗಳು ಆಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ತೆರಳುವ ನಿಟ್ಟಿನಲ್ಲಿ ಸರ್ಟಿಫಿಕೆಟ್ ನೀಡುವ ಉದ್ದೇಶದಿಂದ ಮಂಜೇಶ್ವರ ಸಮಾಜ ಆರೋಗ್ಯ ಕೇಂದ್ರದಲ್ಲಿ ಏ.11ರಂದು ಆರಂಭಿಸಿದ ಸೌಲಭ್ಯಗಳ ಮೂಲಕ ಈಗಾಗಲೇ 12 ಮಂದಿಗೆ ಸರ್ಟಿಫಿಕೆಟ್ ನೀಡಲಾಗಿದೆ.



