ಕಾಸರಗೋಡು: ಕೋವಿಡ್ 19 ಹರಡುತ್ತಿರುವ ಹಿನ್ನೆಲೆಯಲ್ಲಿ ದೇಹದಲ್ಲಿ ರೋಗಪ್ರತಿರೋಧ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಹೋಮಿಯೋಪತಿ ಇಮ್ಯೂನ್ ಬೂಸ್ಟರ್ ಔಷಧಗಳ ವಿತರಣೆ ಆರಂಭಿಸಲಾಯಿತು.
ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅನೌಪಚಾರಿಕವಾಗಿ ಕಾಞಂಗಾಡಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಈ ಸಮಾರಂಭ ಜರುಗಿತು. ಕಾಞಂಗಾಡ್ ನಗರಸಭೆ ವಾಪ್ತಿಯಲ್ಲಿ ವಿತರಣೆ ನಡೆಸಬೇಕಾದ ಔಷಧಗಳನ್ನು ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅವರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಜಿತಾ ರಾಣಿ ಅವರಿಂದ ಪಡೆದುಕೊಂಡರು. ಆರ್.ಎಂ.ಒ. ಡಾ.ಅಶ್ವತಿ, ಆರ್.ಎಸ್.ಸಹಿತ ಸಿಬ್ಬಂದಿ ಭಾಗವಹಿಸಿದರು.
ಜಿಲ್ಲೆಯಲ್ಲಿ ವಿತರಿಸಬೇಕಾದ ಔಷಧಗಳ ಸಂಗ್ರಹ ಸಾಕಷ್ಟು ಈಗಾಗಲೇ ತಲಪಿದೆ. ಎಲ್ಲ ಗ್ರಾಮಪಂಚಾಯತ್ ಗಳು ತಮ್ಮ ಹೋಮಿಯೋ ಸಂಸ್ಥೆಗಳ ಮೂಲಕ ಇಮ್ಯೂನ್ ಬೂಸ್ಟರ್ ಔಷಧಗಳನ್ನು ಜನತೆಗೆ ತಲಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ(ಹೋಮಿಯೋಪತಿ) ಡಾ.ಕೆ.ರಾಮಸುಬ್ರಹ್ಮಣ್ಯಂ ತಿಳಿಸಿರುವರು.


