HEALTH TIPS

ಲಾಕ್ ಡೌನ್ ಅವಧಿಯಲ್ಲಿ ಅಬಕಾರಿ ತಪಾಸಣೆ ಬಿಗಿ

   
          ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯೂ ತನ್ನ ತಪಾಸಣೆ ಬಿಗಿಗೊಳಿಸಿದೆ.
          ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಅವಧಿಯಲ್ಲಿ ಜಿಲ್ಲೆಯಲ್ಲಿ ಮದ್ಯದಂಗಡಿಗಳು, ಔಟ್ ಲೆಟ್ ಗಳು ಮುಚ್ಚುಗಡೆ ನಡೆಸಲಾದ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸಾಗಾಟ, ಬಳಕೆ ಹೆಚ್ಚಳಗೊಳ್ಳುವ ಭೀತಿಯಿದ್ದು, ಅಬಕಾರಿ ಇಲಾಖೆ ತಪಾಸಣೆ ಚುರುಕುಗೊಳಿಸಿದೆ. ಗೇರುಹಣ್ಣಿನ ಸೀಸನ್ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮಲೆನಾಡ ಪ್ರದೇಶದಲ್ಲಿ ಕಳ್ಳ ಭಟ್ಟಿ ವ್ಯಾಪಾಕಗೊಳ್ಳುವ ಸಾಧ್ಯತೆಯಲ್ಲಿ ಗಸ್ತು ಪ್ರಬಲಗೊಳಿಸಲಾಗಿದೆ. 
     ಜಿಲ್ಲೆಯಲ್ಲಿ ಲಾಕ್ ಡೌನ್ ಆರಂಭಗೊಂಡು ಈ ವರೆಗೆ ಜಿಲ್ಲೆಯಲ್ಲಿ 75 ಕೇಸುಗಳನ್ನು ಅಬಕಾರಿ ಇಲಾಖೆ ದಾಖಲಿಸಿದೆ. ಇವುಗಳಲ್ಲಿ 63 ಅಬಕಾರಿ ಕೇಸುಗಳು, 2 ಎನ್.ಡಿ.ಪಿ.ಎಸ್. ಕೇಸುಗಳು, ಹೊಗೆಸೊಪ್ಪು ಉತ್ಪನ್ನಗಳಿಗೆ ಸಂಬಂಧಿಸಿ ಹತ್ತು ಕೇಸುಗಳು ಇವೆ. ಈ ನಿಟ್ಟಿನಲ್ಲಿ ಹೊಸದುರ್ಗ ಸರ್ಕಲ್ ವ್ಯಾಪ್ತಿಯಲ್ಲಿ ಅತ್ಯಧಿಕ ಕೇಸುಗಳು ದಾಖಲಾಗಿವೆ. ಇದರ ಅಂಗವಾಗಿ 23.8 ಲೀಟರ್ ವಿದೇಶಿ ಮದ್ಯ, 4500 ಲೀಟರ್ ಹುಳಿರಸ, 48 ಲೀಟರ್ ಅಕ್ರಮ ಸಾರಾಯಿ, 700 ಗ್ರಾಂ ಗಾಂಜಾ, 5 ಲೀಟರ್ ಶೇಂದಿ, 8 ಲೀಟರ್ ವೈನ್, 15 ಕಿಲೋ ಹೊಗೆಸೊಪ್ಪು ಉತ್ಪನ್ನಗಳನ್ನು ಈ ಅವಧಿಯಲ್ಲಿ ವಶಪಡಿಸಲಾಗಿದೆ. 
      ಅಬಕಾರಿ ವಿಭಾಗಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ದೂರವಾಣಿ ನಂಬ್ರಗಳು : ಕಾಸರಗೋಡು ಅಬಕಾರಿ ವಿಭಾಗೀಯ ಕಚೇರಿ-04994256728, 9447178066, ವಲಯ ಅಬಕಾರಿ ಕಚೇರಿಗಳು: ಕಾಸರಗೋಡು-04994255332, 9400069715, ಹೊಸದುರ್ಗ-04672204125,9400069723, ಅಬಕಾರಿ ವಿಶೇಷ ದಳ-04994257060, 9400069727.
     ಅಭಿಮತ:
          ಪ್ರತಿರೋಧ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ: 
    ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲೂ ಜಿಲ್ಲಾ ಅಬಕಾರಿ ಇಲಾಖೆ ತನ್ನ ಯೋಗದಾನ ನೀಡುತ್ತಿದೆ. ತುರ್ತು ಅನಿವಾರ್ಯತೆಯ ಅಂಗವಾಗಿ ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಅವರ ಆದೇಶ ಪ್ರಕಾರ 245 ಲೀಟರ್ ಸ್ಪಿರಿಟ್ ಜಿಲ್ಲಾ ವೈದ್ಯಾಧಿಕಾರಿ ಅವರಿಗೆ ಹಸ್ತಾಂತರಿಸಲಾಗಿದೆ. ಎರಡನೇ ಹಂತದಲ್ಲಿ ಸ್ಯಾನಿಟೈಸರ್ ನಿರ್ಮಾಣಕ್ಕೆಆಗಿ ಚೀಮೇನಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಡಿಸ್ಟಿಲರಿಗೆ ಒಂದು ಸಾವಿರ ಲೀಟರ್ ಎಕ್ಸ್ಟ್ರಾ ನ್ಯೂಟ್ರಲ್ ಅಲ್ಕೋಹಾಲ್ ವಿತರಿಸಲಾಗಿದೆ.
                                       * ಕೆ.ಕೆ.ಅನಿಲ್ ಕುಮಾರ್, ಅಬಕಾರಿ ಸಹಾಯಕ ಕಮೀಷನರ್. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries