ಕಾಸರಗೋಡು: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ವಿದ್ಯಾನಗರ ಮುಟ್ಟತ್ತೋಡಿ ನಿವಾಸಿ ದೈನಬಿ(50) ಅವರಿಗೆ 48 ಗಂಟೆಗಳ ಆರನೇ ಕೀಮೋಗಾಗಿ ತಿರುವನಂತಪುರದ ಆರ್.ಸಿ.ಸಿ.ಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆಯ ಸಾಕಷ್ಟು ಜನರ ಸಹಕಾರದೊಂದಿಗೆ ತಿರುನಂತಪುರಕ್ಕೆ ಆ್ಯಂಬುಲೆನ್ಸ್‍ನಲ್ಲಿ ಅವರನ್ನು ಸಾಗಿಸಲಾಯಿತು. ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಲು ನೇತೃತ್ವ ನೀಡಿದ್ದು ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಹೀನ ಸಲೀಂ. ಆದರೆ ಕಿಮೋ ಥೆರಫಿಯ ಬಳಿಕ ಕಾಸರಗೋಡಿನ ಮನೆಗೆ ವಾಪಸಾಗುವುದು ಕಷ್ಟದಾಯಕವಾಗಿತ್ತು. ತಿರುವನಂತಪುರದಿಂದ ವಾಪಸು ಮನೆಗೆ ತಲುಪಲು ಆ್ಯಂಬುಲೆನ್ಸ್‍ಗೆ ನೀಡಲು ಹಣವಿರಲಿಲ್ಲ. ಈ ಬಗ್ಗೆ ತಿಳಿದ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ದೈನಬಿ ಅವರನ್ನು ಊರಿಗೆ ತಲುಪಿಸಲು ನೆರವಾಗಬೇಕೆಂದು ಯೂತ್ ಕಾಂಗ್ರೆಸ್‍ನ ರಾಜ್ಯ ಕಾರ್ಯದರ್ಶಿ ನೋಯಲ್ ಟೋಮಿನ್ ಜೋಸೆಫ್ ಅವರನ್ನು ಕೇಳಿಕೊಂಡರು. ಯೂತ್ ಕೇರ್ ಸೇವಾ ಕಾರ್ಯಕ್ರಮದ ಅಂಗವಾಗಿ ನೋಯಲ್ ಹಾಗು ಯೂತ್ ಕಾಂಗ್ರೆಸ್ ಕಾಂಞಂಗಾಡ್ ಮಂಡಲ ಅಧ್ಯಕ್ಷ ಸಂತು ಅವರು ಸಹಕರಿಸಿದರು. ಆ್ಯಂಬುಲೆನ್ಸ್‍ನಲ್ಲಿ ಈ ಮೂಲಕ ದೈನಬಿ ಅವರು ಮನೆಗೆ ತಲುಪಿದರು.


