ಮಂಜೇಶ್ವರ: ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರವಿಲ್ಲದೆ ಅಲೆಯುತ್ತಿರುವ ಬೀದಿ ನಾಯಿಗಳು ಇದೀಗ ಸಾಕು ಪ್ರಾಣಿಳನ್ನೇ ಆಹಾರವಾಗಿ ಪಡೆಯಲು ಯತ್ನಿಸುತ್ತಿದೆ.
ಸುಮಾರು ಹನ್ನೆರಡರಷ್ಟಿದ್ದ ಗುಂಪು ಬೀದಿ ನಾಯಿಗಳು ಕುಂಜತ್ತೂರು ಪರಿಸರದಲ್ಲಿ ಮನೆಯೊಂದರಲ್ಲಿ ಸಾಕುತ್ತಿದ್ದ ಕೋಳಿಗಳ ಗೂಡಿಗೆ ನುಗ್ಗಿ ಸುಮಾರು ಹದಿನೇಳು ಕೋಳಿಗಳನ್ನು ಮಾರಣ ಹೋಮ ನಡೆಸಿದೆ. ಕುಂಜತ್ತೂರು ಜಲಾಲಿಯ್ಯ ಮಸೀದಿ ಸಮೀಪವಾಸಿ ಸಲೀಮ್ ರವರ ಮನೆಯಲ್ಲಿದ್ದ ಟರ್ಕಿ ಹಾಗೂ ಇತರ ಜಾತಿಯ ಸಾಕು ಕೋಳಿಗಳನ್ನು ಕೊಂದು ಹಾಕಿದೆ. ಶಬ್ದಕೇಳಿ ನಾಯಿಯನ್ನು ಅಟ್ಟಾಡಿಸಿದವರ ಮೇಲೂ ನಾಯಿಗಳು ದಾಳಿ ನಡೆಸಿದೆ.
ನಾಯಿಗಳ ಬೊಬ್ಬೆ ಕೇಳಿ ನೆರೆಮನೆ ವಾಸಿಗಳು ಬಂದಾಗಲೇ ಮನೆಯವರ ಗಮನಕ್ಕೆ ಬಂದದ್ದು. ಆವಾಗಲೇ ಸುಮಾರು ಕೋಳಿಗಳನ್ನು ನಾಯಿಗಳು ಕೊಂದು ಬಿಟ್ಟಿತ್ತು. ಲಾಕ್ ಡೌನ್ ಆರಂಭವಾಗುವ ಮೊದಲು ಇದೇ ಪರಿಸರದಲ್ಲಿ ಬಿಡಿ ನಾಯಿಗಳು ಬೆಳಿಗ್ಗೆ ಮದ್ರಸಾಕ್ಕೆ ಹೋಗುವ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಕ್ರಿಯೆ ಮಾಡುತ್ತಿದ್ದರೂ ಬೀದಿ ನಾಯಿಗಳ ಸಂಕ್ಯೆ ವೃದ್ದಿಸುತ್ತಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ.



