HEALTH TIPS

ಗಡಿವಿವಾದ ಇತ್ಯರ್ಥ: ಕರ್ನಾಟಕದದ್ದೆಂದು ಹೇಳಲಾಗುತಿದ್ದ ಒಂದು ಎಕ್ರೆಗೂ ಮಿಕ್ಕ ಸ್ಥಳ ಕಾಸರಗೋಡಿಗೆ


       ಮಂಜೇಶ್ವರ: ಕರ್ನಾಟಕ ಕೇರಳ ಗಡಿಯಾದ ತಲಪಾಡಿಯಲ್ಲಿ ಭುಗಿಲೆದ್ದ ಗಡಿ ವಿವಾದ ಕೊನೆಗೂ ಇತ್ಯರ್ಥಗೊಂಡು ಕರ್ನಾಟಕದ್ದೆಂದು ಹೇಳಲಾಗುತಿದ್ದ ಸುಮಾರು ಒಂದು ಎಕ್ರೆಗಿಂತಲೂ ಮಿಕ್ಕ ಸ್ಥಳ ಕಾಸರಗೋಡು ಜಿಲ್ಲೆಗೆ ಲಭಿಸಿದೆ.
       ಉಭಯ ಜಿಲ್ಲೆಗಳ ಉದಯದ ಬಳಿಕ ಈ ಸ್ಥಳಗಳಲ್ಲಿ ವಿವಾದ ಅಥವಾ ಅಪಘಾತ ಸಂಭವಿಸಿದಾಗೆಲ್ಲ ಈವರೆಗೆ ಎರಡು ಜಿಲ್ಲೆಗಳ ಪೆÇಲೀಸರು ಅದು ನಮ್ಮದಲ್ಲ ಎಂದು ಹೇಳಿ ಕೈ ತೊಳೆಯುತಿದ್ದರು. ಇದು ಭಾರಿ ಸಮಸ್ಯೆಗೂ ಕಾರಣವಾಗುತ್ತಿತ್ತು. ಇದೀಗ ಕೊರೊನಾ ವೈರಸ್ ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳ ಗಡಿ ಸಮಸ್ಯೆ ಎದುರಾದಾಗ ದಶಕಗಳಿಂದೀಚೆಗೆ ನಡೆಯಿತ್ತಿದ್ದ ಗಡಿ ತರ್ಕ ಕೂಡಾ ಇತ್ಯರ್ಥವಾಗಿದೆ.
       ಗುರುವಾರ ಕೇರಳ ಪೆÇಲೀಸರು ಸ್ಥಾಪಿಸಿದ್ದ ಚೆಕ್ ಪಾಯಿಂಟಿಗೆ ಕರ್ನಾಟಕ ಪೆÇಲೀಸರು ತಡೆಯೊಡ್ಡಿದ್ದರು. ಆದರೆ ಶುಕ್ರವಾರ ಉಭಯ ಜಿಲ್ಲೆಗಳ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸರ್ವೇ ಯಲ್ಲಿ ಮೊದಲು ಕೇರಳ ಪೆÇಲೀಸ್ ಹಾಕಿದ ಸ್ಥಳಕ್ಕಿಂನಿಂದ ಅಲ್ಪ ಆಚೆಯೇ ಗಡಿ ಗುರುತು ಮಾಡಿದ ಹಿನ್ನೆಲೆಯಲ್ಲಿ ಮೊದಲಿನ ಚೆಕ್ ಪಾಯಿಂಟನ್ನೇ ಮುಂದುವರಿಸಲಾಗಿದೆ. ಬಳಿಕ ಗಡಿಗೆ ಗುರುತು ಹಾಕಿ ಫಲಕ ಹಾಕುವ ಕಾರ್ಯ ಮುಂದುವರಿದಿದೆ.  ಕೇರಳದ ಸ್ಥಳದಲ್ಲಿ ಕರ್ನಾಟಕ ತಲಪಾಡಿ ಗ್ರಾಮ ಪಂಚಾಯಿತಿನದ್ದೆಂದು ಹೇಳಿ ಅನೇಕರಿಗೆ ಹಕ್ಕು ಪತ್ರ ನೀಡಿದೆಯೆನ್ನಲಾಗುತ್ತಿದ್ದು ಈ ವಿಷಯವನ್ನು ಕಾಸರಗೋಡು ಜಿಲ್ಲಾಧಿಕಾರಿಯ ಗಮನಕ್ಕೆ ತಂದು ಅದನ್ನು ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಪಂ. ವತಿಯಿಂದ ಮನವಿ ಸಲ್ಲಿಸಲಾಗುವುದಾಗಿ ಕಾಸರಗೋಡು ಜಿಲ್ಲಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ವಿಜಯವಾಣಿಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ನೂತನ ಗಾಡಿಯನ್ನು ಗುರುತಿಸಿರುವ ಸ್ಥಳದಲ್ಲಿ ಪಂ. ವತಿಯಿಂದ ನಾಮ ಫಲಕವನ್ನು ಹಾಕಿ ಯೂ ಟರ್ನ್ ನಿರ್ಮಿಸಿ ಸುಸಜ್ಜಿತ ವಿದ್ಯುತ್ ದೀಪ ಸ್ಥಾಪಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
       ಈ ಸಂದರ್ಭ ಪ್ರತಿಕ್ರಿಯಿಸಿದ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತನಾಡಿ ಉಭಯ ಜಿಲ್ಲೆಗಳ ಗಡಿ ತರ್ಕವೊಂದು ಇದೀಗ ಮುಕ್ತಾಯಗೊಂಡಿದೆ.  ಮಾತ್ರವಲ್ಲದೆ ಉಭಯ ಜೆಲ್ಲೆಗಳ ತಪಾಸಣಾ ಕೇಂದ್ರಗಳು ಕೂಡಾ ಸಮೀಪದಲ್ಲೇ ಇರುವ ಕಾರಣ ಸಮಸ್ಯೆಗಳಿಗೆ ವಿಳಂಬವಿಲ್ಲದೆ ಇತ್ಯರ್ಥವನ್ನು ಕಾಣಲು ಕೂಡಾ ಸಾಧ್ಯವಿರುವುದಾಗಿ ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries