ಕಾಸರಗೋಡು: ನೀಲೇಶ್ವರ ನಗರಸಭೆ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಆರಂಭಿಸಲು ತೀರ್ಮಾನಿಸಲಾಗಿದೆ. ತಾಲೂಕು ಆಸ್ಪತ್ರೆಗಾಗಿ ನಿರ್ಮಿಸಲಾಗುವ ನೂತನ ಬ್ಲಾಕ್ ನಲ್ಲಿ ಡಯಾಲಿಸಿಸ್ ಸೌಲಭ್ಯ ಏರ್ಪಡಿಸಲಾಗುವುದು. ಏಕಕಾಲಕ್ಕೆ ಹತ್ತು ಮಂದಿಗೆ ಡಯಾಲಿಸಿಸ್ ನಡೆಸುವ ಸೌಕರ್ಯ ಇಲ್ಲಿರುವುದು. ಇದರಲ್ಲಿ 6 ಯೂನಿಟ್ ಕೆ.ಎಂ.ಸಿ.ಎಲ್. ನಿಂದ ಮತ್ತು 4 ಯೂನಿಟ್ ಶಾಸಕ ಎಂ.ರಾಜಗೋಪಾಲ್ ಅವರ ನಿಧಿಯಿಂದ ಜಾರಿಗೊಳಿಸಲಾಗುವುದು. ಕಟ್ಟಡದ ಉಳಿದ ಸೌಲಭ್ಯಗಳನ್ನು ನೀಲೇಶ್ವರ ನಗರಸಭೆಯ ನಿಧಿಯಿಂದ ಜಾರಿಗೊಳಿಸಲಾಗುವುದು.
ಈ ಸಂಬಂಧ ಶಾಸಕ ಎಂ.ರಾಜಗೋಪಾಲ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ನಗರಸಭೆ ಅಧ್ಯಕ್ಷ ಪೆÇ್ರ. ಕೆ.ಪಿ.ಜಯರಾಜನ್ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅವಲೋಕನ ನಡೆಸಿದ್ದಾರೆ. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ತೋಟತ್ತಿಲ್ ಕುಂuಟಿಜeಜಿiಟಿeಜಕಣ್ಣನ್, ಸದಸ್ಯರಾದ ಪಿ.ಮನೋಹರನ್, ಕೆ.ಪ್ರಕಾಶನ್, ಎ.ವಿ.ಸುರೇಂದ್ರನ್, ಪಿ.ವಿ.ರಾಧಾಕೃಷ್ಣನ್, ಕೆ.ವಿ.ಸುಧಾಕರನ್ ಜೊತೆಗಿದ್ದರು.


