ಕಾಸರಗೋಡು: ಕಾಸರಗೋಡು ಜಿಲ್ಲೆಯ ಬೀಡಿ ಕಾರ್ಮಿಕರು ಡಿಪೆÇೀಗಳಲ್ಲಿ ಶನಿವಾರ, ಭಾನುವಾರಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಕೋವಿಡ್ 19 ಪ್ರತಿರೋಧ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಚಟುವಟಿಕೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ನಿಟ್ಟಿನಲ್ಲಿ ಡಿಪೆÇೀ ನಿರ್ವಹಣೆಯ ಹೊಣೆ ಹೊತ್ತವರು ಜಿಲ್ಲಾಧಿಕಾರಿ ಕಚೇರಿಯ ಕೊರೋನಾ ನಿಯಂತ್ರಣ ಕೊಠಡಿಯ 04994255001 ಎಂಬ ನಂಬ್ರಕ್ಕೆ ಕರೆಮಾಡಿ ಪಾಸ್ ಪಡೆದುಕೊಳ್ಳಬೇಕು. ಕೊರೋನಾ ಪ್ರತಿರೋಧ ಸಂಬಂಧ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸಲಹೆ-ಸೂಚನೆಗಳ ಪಾಲನೆಯನ್ನು ಡಿಪೆÇೀ ನಿರ್ವಹಣೆದಾರರು ಖಚಿತಪಡಿಸಬೇಕು ಎಂದವರು ತಿಳಿಸಿರುವರು.
ಅವಕಾಶ ಒದಗಿಸಲಾಗಿದೆ
ಬೀಡಿ ಕಾರ್ಮಿಕರಿಗೆ ಅಗತ್ಯವಿರುವ ಕಚ್ಚಾವಸ್ತುಗಳು ಸಂಸ್ಥೆಗಳಿಂದ ಮನೆಗಳಿಗೆ ತಲಪಿಸುವ ಮತ್ತು ಮನೆಗಳಲ್ಲಿ ಬೀಡಿ ನಿರ್ಮಿಸಿ ಸಂಸ್ಥೆಗಳಿಗೆ ತಲಪಿಸುವ ನಿಟ್ಟಿನಲ್ಲಿ ಸೋಮವಾರ, ಮಂಗಳವಾರ ಅವಕಾಶ ನೀಡಲಾಗಿದೆ. ಇದಕ್ಕಿರುವ ಪಾಸ್ ಗೆ ದೂರವಾಣಿ ನಂಬ್ರ : 04994255001.


