ಕಾಸರಗೋಡು: ಉಚಿತ ಪಡಿತರ ವಿತರಣೆ ಪೂರ್ತಿಗೊಳ್ಳುತ್ತಿದ್ದಂತೆ, ರಾಜ್ಯ ಸರ್ಕಾರ ಘೋಷಿಸಿರುವ ಉಚಿತ ಆಹಾರ ಸಾಮಾಗ್ರಿಗಳ ಕಿಟ್ ಪೂರೈಕೆ ಆರಂಭಿಸಲಾಗಿದೆ. 17 ಆಹಾರ ಸಾಮಾಗ್ರಿಗಳು ಸೇರಿರುವ ಸಾಮಗ್ರಿ ಕಿಟ್‍ನಲ್ಲಿರಲಿದೆ. ಮೊದಲ ಹಂತದಲ್ಲಿ ಆದ್ಯತೆ ಪಟ್ಟಿಯಲ್ಲಿರುವ (ಹಳದಿ, ಪಿಂಕ್ ಕಾರ್ಡ್ ಗಳು) ವಿಭಾಗದ ಮಂದಿಗೆ ಉಚಿತ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗುವುದು. ನಂತರ ಎಲ್ಲ ಕಾರ್ಡ್ ದಾರರಿಗೂ ವಿತರಣೆ ಜರುಗಲಿದೆ. ಈ ಕಿಟ್‍ಗಳಿಗೆ ಅಗತ್ಯವಿರುವ ಬಟ್ಟೆ ಚೀಲಗಳು ಕುಟುಂಬಶ್ರೀ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದೆ. ಸಪ್ಲೈ ಕೋ ಔಟ್ ಲೆಟ್ ಗಳ ಮೂಲಕ ಕಿಟ್ ವಿತರಿಸಲಾಗುವುದು.
ಪಡಿತರ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜಿಲ್ಲೆಯ ಪಡಿತರ ಅಂಗಡಿಗಳು ಯಶಸ್ವಿಯಾಗಿವೆ. ಜಿಲ್ಲೆಯಲ್ಲಿ ಆಹಾರ ಸಾಮಾಗ್ರಿಗಳ ಕೊರತೆ ತಲೆದೋರದಂತೆ ಎಲ್ಲ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾ ಸಪ್ಲೈ ಅಧಿಕಾರಿ ವಿ.ಕೆ. ಶಶೀಂದ್ರನ್‍ತಿಳಿಸಿದರು.

