HEALTH TIPS

ಮನ್ ಕಿ ಬಾತ್: ಇಂದು ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

   
       ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್? ಆರ್ಭಟವೂ ಭಾರತದಲ್ಲಿ ಮುಂದುವರಿದಿದೆ. ಈ ಕೋವಿಡ್-19 ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಅವಧಿಗೆ ಮೇ 3ರವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶಿಸಿದ್ದಾರೆ. ಈ ಮಧ್ಯೆ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮಾತಾಡುತ್ತಿರುತ್ತಾರೆ. ಈ ಹಿಂದೆ ಜನತಾ ಕಫ್ರ್ಯೂ ಸಂದರ್ಭದಲ್ಲಿ ಸೇರಿದಂತೆ ಹಲವು ಬಾರಿ ದೇಶವನ್ನುದ್ದೇಶಿಸಿ ಮಾತಾಡಿದ್ದರು. ಈ ಅದೇ ಮಾದರಿಯಲ್ಲೇ ಕೊರೋನಾ ವೈರಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು  ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
         ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್ ಸೈಟ್, ನ್ಯೂಸ್ ಆನ್ ಎಐಆರ್ ಆಪ್ ನಲ್ಲೂ ಪ್ರಧಾನಿಯವರ ಭಾಷಣ ಪ್ರಸಾರವಾಗಲಿದೆ.
        ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ಎರಡನೇ ಅವಧಿಗೆ ಜಾರಿ ಮಾಡಲಾದ ಲಾಕ್ ಡೌನ್ ಪರಿಣಾಮದಿಂದ ಕಡೆಗೂ ಕೊರೋನಾ ವೈರಸ್ ದೇಶದಲ್ಲಿ ನಿಯಂತ್ರಣಕ್ಕೆ ಬಂದಿದೆ. ಹಾಗಾಗಿಯೇ ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚುಗುತ್ತಿದೆ  ಎಂಬ ಸಂಶಯ ಕಾಣಿಸಿದರೂ ಸೋಂಕಿತರ ಸಂಖ್ಯೆ ಮಾತ್ರ ದಿಢೀರ್ ಏರಿಕೆಯಾಗುತ್ತಿಲ್ಲ. ಇದರರ್ಥ ಕೊರೋನಾ ಪ್ರಮಾಣವೂ ದೇಶಾದ್ಯಂತ ಇಳಿಕೆಯಾಗುತ್ತಿರುವ ಮುನ್ಸೂಚನೆ ನೀಡಿದಂತಿದೆ.
     ಮಾರ್ಚ್ 23ರಿಂದ ಏಪ್ರಿಲ್ 23ರವರೆಗೂ ಸುಮಾರು 5 ಲಕ್ಷ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ಪರಿಣಾಮ ಒಂದು ತಿಂಗಳ ಅವಧಿಯಲ್ಲಿ ಸೋಂಕಿತರ ಪತ್ತೆ ಪ್ರಮಾಣ ಹೆಚ್ಚು ಇತ್ತು. ಆದರೀಗ ಕೊರೋನಾ ಪರೀಕ್ಷೆ ಪ್ರಮಾಣ ಇದರ 33 ಪಟ್ಟು ಹೆಚ್ಚಿಸಲಾಗಿದೆ. ಹೀಗಿದ್ದರೂ ಕೊರೋನಾ ಹರಡುವಿಕೆ ಪ್ರಮಾಣ ಶೇ.6ರಷ್ಟು ಮಾತ್ರ ಇದೆ. ಈ ಮೂಲಕ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ.
       ಪ್ರತಿದಿನ ಶೇ.100ರ ಗಡಿ ದಾಟುತ್ತಿದ್ದ ಕೊರೋನಾ ಸೋಂಕು ಈಗ ದಿಢೀರ್ ನಿನ್ನೆ ಮಾತ್ರ ಶೇ.6ಕ್ಕೆ ಇಳಿಕೆಯಾಗಿದೆ. ಇದರರ್ಥ ದೇಶದಲ್ಲಿ ಕೊರೋನಾ ವೈರಸ್ ಹರಡುವ ವೇಗ ಕಡಿಮೆಯಾಗಿದೆ ಎಂದು. ಇನ್ನು ಮುಂದೆಯೂ ಲಾಕ್‍ಡೌನ್ ಮುಗಿದ ನಂತರ ಇನ್ನಷ್ಟು ಕಡಿಮೆಯಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries