HEALTH TIPS

ಸರ್ಕಾರದ ಪೆÇೀರ್ಟಲ್ ಮೂಲಕ ಕೊರೋನಾ ವಾರಿಯರ್ಸ್ ಆಗಿ:ಪ್ರಧಾನಿ ಮೋದಿ ಕರೆ

 
         ನವದೆಹಲಿ: ಇಂದು ನಾವೆಲ್ಲರೂ ಯುದ್ಧ ಸನ್ನಿವೇಶದ ಮಧ್ಯದಲ್ಲಿದ್ದೇವೆ, ಅದು ಕೊರೋನಾ ವೈರಸ್ ವಿರುದ್ಧದ ಯುದ್ಧ.ಈ ಯುದ್ಧದಲ್ಲಿ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತಿದೆ. ಸಾರ್ವಜನಿಕರು, ಜನಸೇವಕರು, ಅಧಿಕಾರಿಗಳು ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಹೋರಾಟವಿದು. ಇಲ್ಲಿನ ಪ್ರತಿಯೊಬ್ಬ ಪ್ರಜೆ ಕೊರೋನಾ ಯುದ್ಧವನ್ನು ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
     ಅವರು ಈಗಷ್ಟೇ ತಮ್ಮ ಆಕಾಶವಾಣಿಯ ತಿಂಗಳ ಕಾರ್ಯಕ್ರಮ ಮನದ ಮಾತಿನಲ್ಲಿ(ಮನ್ ಕಿ ಬಾತ್) ಮುಖ್ಯವಾಗಿ ಕೊರೋನಾ ವೈರಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
      ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ರನ್ನು  coronawarriors.gov.in ಪೆÇೀರ್ಟಲ್ ಮೂಲಕ ಸಂಪರ್ಕಿಸುವಂತೆ ಒತ್ತಾಯಿಸಿದರು. ಇತ್ತೀಚೆಗೆ ಆರಂಭಗೊಂಡ ಈ ಪೆÇೀರ್ಟಲ್ ನಲ್ಲಿ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದಾರೆ ಎಂದರು.
     ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೋನಾ ವಾರಿಯರ್ಸ್ ಆಗಬಹುದು ಎಂದರು.
    ಯಾವ ಕಾರಣಕ್ಕೂ ಎಚ್ಚರ ತಪ್ಪದೆ ಜಾಗರೂಕತೆ ಪಾಲಿಸುವಂತೆ ಮೋದಿ ಕರೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries