ಕಾಸರಗೋಡು: ವಿಷು ಹಬ್ಬಕ್ಕೆ ಪಟಾಕಿ ಸಹಿತ ವೆಚ್ಚಕ್ಕಾಗಿ ಸಂಗ್ರಹಿಸಿದ್ದ 1053 ರೂ. ಮೊತ್ತವನ್ನು ಮುಖ್ಯಮಂತ್ರಿ ಅವರ ವಿಪತ್ತು ನಿವಾರಣಾ ನಿಧಿಗೆ ಹಸ್ತಾಂತರಿಸುವ ಮೂಲಕ ಬಾಲಕನೊಬ್ಬ ಮಾದರಿಯಾಗಿದ್ದಾನೆ. ನೀಲೇಶ್ವರ ಕೊಯಾಂಪುರಂ ನಿವಾಸಿ ಪ್ರಯೇಷ್-ರೇಷ್ಮಾ ದಂಪತಿ ಪುತ್ರ ದೇವಹರ್ಷ್ ಮಾದರಿಯಾದ ಬಾಲಕ. ಈತ ಪರಿತ್ತಿಕಾಮುರಿ ಶಾಲೆಯ ಪ್ರಾಥಮಿಕ ಪೂರ್ವ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ. ನೀಲೇಶ್ವರಂ ಜನಮೈತ್ರಿ ಪೆÇೀಸರಿಗೆ ಈ ನಿಧಿಯನ್ನು ಆತ ಹಸ್ತಾಂತರಿಸಿದ್ದಾನೆ. ವಿಷು ಹಬ್ಬವನ್ನು ವೈಭವಯುತವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿವರ್ಷ ಹಣಸಂಗ್ರಹಿಸಿಟ್ಟುಕೊಳ್ಳುವುದನ್ನು ರೂಡಿಯಾಗಿಸಿಕೊಂಡಿದ್ದ ದೇವಹರ್ಷ, ಈ ಬಾರಿ ರಾಜ್ಯವನ್ನು ತಲ್ಲಣಗೊಳಿಸಿರುವ ಮಹಾಮಾರಿ ಕರೊನಾ ವಿರುದ್ಧ ಹೋರಾಟ ನಡೆಸುವ ಸರ್ಕಾರಕ್ಕೆ ನೆರವಾಗುವ ಇಂಗಿತವ್ಯಕ್ತಪಡಿದಿದಾನೆ. ವರ್ಷಾರಂಭದಿಂದಲೇ ಕೊಂಚ ಕೊಂಚವಾಗಿಸಂಗ್ರಹಿಸುತ್ತಾ ಬಂದ ಮೊಬಲಗನ್ನು ಈಗ ಈ ರೀತಿ ಸಲ್ಲಿಸಲು ತೀರ್ಮಾನಿಸಿದ್ದಾನೆ ಎಂದು ಬಾಲಕನ ತಂದೆ ಪ್ರಿಯೇಷ್ ತಿಳಿಸಿದರು. ಸ್ಥಳೀಯ ವಾರ್ಡ್‍ಸದಸ್ಯ ಗೀತಾ ಅವರ ಸಹಾಯದೊಂದಿಗೆ ಈ ನಿಧಿ ಹಸ್ತಾಂತರಿಸಲಾಗಿದೆ.
ವಿಷು ಹಬ್ಬಕ್ಕಾಗಿ ಸಂಗ್ರಹಿಸಿಟ್ಟಿದ್ದ ಮೊತ್ತ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದ ಬಾಲಕ
0
ಏಪ್ರಿಲ್ 15, 2020