ಕಾಸರಗೋಡು: ಕರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಅರ್ಬುದ ರೋಗ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಪ್ರತಿ ಜಿಲ್ಲೆಗೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ತೆರೆಯುವ ಸರ್ಕಾರದ ತೀರ್ಮಾನ ದೇಶದಲ್ಲಿ ಮೊದಲಬಾರಿಯೆನಿಸಲಿದೆ. ಕಾಸರಗೋಡು ಜಿಲ್ಲಾಸ್ಪತ್ರೆ ಸಹಿತ ರಾಜ್ಯದ 21ಕೇಂದ್ರಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಗೊಳ್ಳಲಿದೆ.
ಅರ್ಬುದ ರೋಗಿಗಳಲ್ಲಿ ರೋಗಪ್ರತಿರೋಧ ಶಕ್ತಿ ಗಣನೀಯವಾಗಿ ಕಡಿಮೆಯಿದ್ದು, ಇಂತಹ ರೋಗಿಗಳಿಗೆ ಕರೊನಾ ಬಾಧಿಸಿದಲ್ಲಿ ಆರೋಗ್ಯಪರಿಸ್ಥಿತಿ ಗಂಭೀರವಾಗಿ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಇಂತಹ ರೋಗಿಗಳನ್ನು ದೀರ್ಘ ದೂರ ಪ್ರಯಾಣ ನಡೆಸದೆ, ಶೀಘ್ರ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.


